ಮಕ್ಕಳಿಬ್ಬರನ್ನು ನದಿಗೆಸೆದು ಆತ್ಮಹತ್ಯೆ ಮಾಡಿಕೊಂಡ ತಂದೆ!

water death
ಸಾಂದರ್ಭಿಕ ಚಿತ್ರ
Published on

ಕೊಚ್ಚಿ: ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ನದಿಗೆ ಎಸೆದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ದುರಂತ ಪ್ರಕರಣ ನಡೆದಿದೆ. 57 ವರ್ಷದ ವ್ಯಕ್ತಿಯೊಬ್ಬ ಇಂಥ ಅತಿರೇಕದ ಕೆಲಸವನ್ನು ಮಾಡಿದ್ದಾನೆ.

ಕೇರಳದ ಕೊಚ್ಚಿಯ ಪಲರಿವಟ್ಟಂ ನಿವಾಸಿ ಉಲ್ಲಾಸ್ ಹರಿಹರನ್​ (57) ಮಕ್ಕಳಿಬ್ಬರನ್ನು ನದಿಗೆ ತಳ್ಳಿದ ತಂದೆ. ಮಕ್ಕಳಾದ ಕೃಷ್ಣಪ್ರಿಯ ಮತ್ತು ಮೇಘನಾಥ್ ಸಾವಿಗೀಡಾಗಿದ್ದಾರೆ.

ಈತ ತನ್ನ ಮಕ್ಕಳಿಬ್ಬರನ್ನು ಇಲ್ಲಿನ ಅಲುವ ಬಳಿ ಪೆರಿಯಾರ್ ನದಿಗೆ ತಳ್ಳಿದ್ದು, ಬಳಿಕ ತಾನೂ ನೀರಿಗೆ ಹಾರಿದ್ದಾನೆ. ಇದನ್ನು ನೋಡಿದ ಸ್ಥಳೀಯರು ನೀರಿಗೆ ಧುಮುಕಿ ಮಕ್ಕಳನ್ನು ರಕ್ಷಿಸಲು ಯತ್ನಿಸಿದರು. ಆದರೆ ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವಿಗೀಡಾಗಿದ್ದಾರೆ.

ಪೊಲೀಸರು ಹಾಗೂ ರಕ್ಷಣಾ ಪಡೆಯುವರು ನಡೆಸಿದ ಕಾರ್ಯಾಚರಣೆಯಲ್ಲಿ ಉಲ್ಲಾಸ್​ ಶವ ಪತ್ತೆಯಾಗಿದೆ. ಉಲ್ಲಾಸ್ ಇಂಥ ಕೆಲಸ ಮಾಡಿದ್ದೇಕೆ ಎಂಬುದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net