

ಚಿಕ್ಕಬಳ್ಳಾಪುರ: ಪ್ರೇಮಿಗಳ ದಿನವೇ ನಂದಿಬೆಟ್ಟದಲ್ಲಿ ಯುವಕನ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎನ್ನುವ ಶಂಕೆ ಶುರುವಾಗಿದೆ. ಈತ ನಂದಿಬೆಟ್ಟದ ಟಿಪ್ಪು ಡ್ರಾಪ್ ನಿಂದ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಬರಹಳ್ಳಿ ಗ್ರಾಮದ ಅರುಣ್ (೨೨) ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎನ್ನುವ ಅನುಮಾನ ಶುರುವಾಗಿದೆ. ಈ ಎಲ್ಲಾ ಅನುಮಾನಗಳಿಗೂ ಕಾರಣ ಆಗಿದ್ದು ನಂದಿಬೆಟ್ಟದ ಪಾರ್ಕಿಂಗ್ ಪ್ಲಾಟ್ ನಲ್ಲಿ ಅನಾಥವಾಗಿರೋ ಢ್ಯುಕ್ ಬೈಕ್!
ಅನಾಥವಾಗಿದ್ದ ಡ್ಯುಕ್ ಬೈಕ್ ಯಾರಿಗೆ ಸೇರಿದ್ದು ಎನ್ನುವ ಪ್ರಶ್ನೆಯನ್ನು ಬೆನ್ನತ್ತಿದ್ದ ಪೊಲೀಸರಿಗೆ ಅರುಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ಮೂಡಿದೆ.
ಅರುಣ್ರನ್ನು ಪತ್ತೆ ಮಾಡಲು ಹೊರಟ ನಂದಿಗಿರಿಧಾಮ ಪೊಲೀಸರಿಗೆ ಟಿಪ್ಪು ಡ್ರಾಪ್ ಬಳಿ ಬ್ಯಾಗ್ ಸಹ ಪತ್ತೆಯಾಗಿದ್ದು ಪೊಲೀಸರ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ. ಹೀಗಾಗಿ ನಂದಿಬೆಟ್ಟದ ಟಿಪ್ಪು ಡ್ರಾಪ್ ನಿಂದ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎನ್ನುವ ಅನುಮಾನ ಬಲವಾಗುತ್ತಿದೆ.
ಅತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಅರುಣ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ನಂದಿಬೆಟ್ಟದ ಟಿಪ್ಪು ಡ್ರಾಪ್ ನಲ್ಲಿ ಮೃತದೇಹಕ್ಕಾಗಿ ಶೋಧ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.