More

    ಜೂಜು ಆಡಲು 2.3 ಕೋಟಿ ರೂ. ಠೇವಣಿ ಹಣ ಕದ್ದ ಬ್ಯಾಂಕ್​ ಉದ್ಯೋಗಿ!

    ಹಾವೇರಿ: ಆನ್‌ಲೈನ್‌ನಲ್ಲಿ ಜೂಜು ಆಡಲು ಗ್ರಾಹಕರು ಠೇವಣಿ ಇಟ್ಟಿದ್ದ 2.36 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಹಾವೇರಿಯ ಬ್ಯಾಂಕ್‌ನ 28 ವರ್ಷದ ಸಹಾಯಕ ವ್ಯವಸ್ಥಾಪಕರನ್ನು ಬಂಧಿಸಲಾಗಿದೆ. 2 ಕೋಟಿಗೂ ಅಧಿಕ ಮೊತ್ತದ ವಂಚನೆಯಾಗಿರುವುದರಿಂದ ಜಿಲ್ಲಾ ಪೊಲೀಸರು ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಹಸ್ತಾಂತರಿಸಿದ್ದಾರೆ.

    ಬಂಧಿತ ಆರೋಪಿಯನ್ನು ಹಾವೇರಿ ಪಟ್ಟಣದ ನಿವಾಸಿ ವಿರೇಶ ಕಾಶಿಮಠ ಎಂದು ಗುರುತಿಸಲಾಗಿದ್ದು, ಇವರು ಐಸಿಐಸಿಐ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಇದನ್ನೂ ಓದಿ:ಕಣ್ಗಾವಲು ವ್ಯವಸ್ಥೆ ಅಗತ್ಯ: ಜೂಜು- ಅಕ್ರಮ ಸಾಲ ಚೀನಾ ಆ್ಯಪ್​ಗೆ ನಿಷೇಧ

    ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ದೇವಧರ್ ಲಾಡೆ ಅವರು ಇತ್ತೀಚೆಗೆ ಹಾವೇರಿ ಟೌನ್ ಪೊಲೀಸರನ್ನು ಸಂಪರ್ಕಿಸಿದಾಗ 2.36 ಕೋಟಿ ರೂ.ನಷ್ಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆಂತರಿಕ ತನಿಖೆ ನಡೆಸಿದ ಬ್ಯಾಂಕ್​ಗೆ, ಕಾಶಿಮಠ ಅವರು ಬ್ಯಾಂಕಿಂಗ್ ಕಾರ್ಯಾಚರಣೆಗೆ ಅಗತ್ಯವಿರುವ ಖಾತೆಗಳನ್ನು ಹೊರತುಪಡಿಸಿ ದಿನಕ್ಕೆ 5 ಲಕ್ಷ ರೂ.ಯನ್ನು ಕಳೆದ ವರ್ಷ ಆಗಸ್ಟ್‌ನಿಂದ ಆಗಾಗ ಗೆಳೆಯ ಮಹಾಂತೇಶಯ್ಯ ಪಿ ಹಿರೇಮಠ ಅವರ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದ್ದರು. ಇದು ಹಲವಾರು ತಿಂಗಳುಗಳವರೆಗೆ ಯಾರ ಗಮನಕ್ಕೂ ಬಂದಿಲ್ಲ ಆದರೆ ಇತ್ತೀಚೆಗೆ, ಶಾಖೆಯ ಲೆಕ್ಕಪರಿಶೋಧನೆ ನಡೆಸುವಾಗ ಬ್ಯಾಂಕ್‌ನ ಅಧಿಕಾರಿಗಳು ಅಪಾರ ಪ್ರಮಾಣದ ಹಣ ಕಾಣೆಯಾಗಿದೆ ಎಂಬುದನ್ನು ಕಂಡುಕೊಂಡಿದ್ದರು. ಆಗ ಈತನ ಕಳ್ಳಾಟ ಬಯಲಾಗಿದೆ.

    “ಕಾಶೀಮಠ ಅವರು ಹಿರೇಮಠಗೆ ಹಣ ವರ್ಗಾವಣೆ ಮಾಡುತ್ತಿದ್ದರು. ನಂತರ ಅದೇ ಹಣವನ್ನು ಆನ್‌ಲೈನ್ ಜೂಜಿನ ಆಟವಾಡಲು ಬಳಸುತ್ತಿದ್ದರು ಎಂದು ವಿಚಾರಣೆ ನಡೆಸಿದಾಗ ಕಂಡುಬಂದಿದೆ. ಅವರು ಹಲವು ಬಾರಿ 5 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿದ್ದು ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಫೆಬ್ರವರಿ 7ರಂದು ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    “ಕಾಶಿಮಠ ಅವರು ಆನ್‌ಲೈನ್ ಆಟಗಳ ವ್ಯಸನಿಯಾಗಿದ್ದರು. ಹೀಗಾಗಿ ಅವರು ಗ್ರಾಹಕರು ಇರಿಸಿದ್ದ ಠೇವಣಿಯನ್ನು ಕಸಿದುಕೊಳ್ಳಲು ಪ್ರಾರಂಭಿಸಿದರು. ಅವರು ರಮ್ಮಿ ಮತ್ತು ಇತರ ಆನ್‌ಲೈನ್ ಆಟಗಳನ್ನು ಆಡುತ್ತಿದ್ದರು. ನಾವು ಕಾಶಿಮಠ ಅವರನ್ನು ಬಂಧಿಸಿದಾಗ, ನಾವು ಅವರಿಂದ 32 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದೇವೆ.

    ಇದನ್ನೂ ಓದಿ: ಜೂಜು ಅಡ್ಡೆ ಮೇಲೆ ದಾಳಿ: ಹಣ ಜಪ್ತಿ ಮಾಡಿ ಕೇಸ್​ ದಾಖಲಿಸದ ನಾಲ್ವರು ಪೊಲೀಸರ ಬಂಧನ

    2 ಕೋಟಿಗೂ ಹೆಚ್ಚು ವಂಚನೆ ನಡೆದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದ್ದು ಮುಂದಿನ ತನಿಖೆ ನಡೆಸಲಾಗುವುದು ಎಂದು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts