More

    ಜೂಜು ಅಡ್ಡೆ ಮೇಲೆ ದಾಳಿ: ಹಣ ಜಪ್ತಿ ಮಾಡಿ ಕೇಸ್​ ದಾಖಲಿಸದ ನಾಲ್ವರು ಪೊಲೀಸರ ಬಂಧನ

    ಹೊಸಪೇಟೆ: ಇಸ್ಪೀಟ್​ ಜೂಜುಕೋರರಿಂದ 20 ಸಾವಿರ ರೂ. ನಗದು ಹಾಗೂ ಮೊಬೈಲ್​ ದೋಚಿ, ಪ್ರಕರಣ ದಾಖಲಿಸದೆ ವಂಚಿಸಿದ್ದ ನಾಲ್ವರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ.

    ಹೊಸಪೇಟೆ ಪಟ್ಟಣ ಠಾಣೆಯ ಪೇದೆಗಳಾದ ಎಂ.ಮಹೇಶ್​, ಎಚ್​.ಟಿ.ಅಭಿಷೇಕ, ಎಂ.ಮಂಜುನಾಥ ಮತ್ತು ಶ್ರೀಕಾಂತ ಮೇಟಿ ಬಂಧಿತರು. ಈ ನಾಲ್ವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ದೀಪಾವಳಿ ಹಬ್ಬದ ನಿಮಿತ್ತ ಅ.23ರಂದು ಬೆಳಗಿನಜಾವ ನಗರದ ಹಳೇ ಕೆಇಬಿ ಹಿಂಭಾಗದ ಚಲುವಾದಿ ಕೇರಿಯ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಇಸ್ಪೀಟ್​ ಆಡುತ್ತಿದ್ದರು. ಮಾಹಿತಿ ತಿಳಿದ ನಾಲ್ವರು ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕೆಲವರು ಓಡಿ ಹೋಗಿದ್ದು, ವೆಂಕಟೇಶ್​ ಮತ್ತು ಪರಸ, ಸತ್ಯೇಶ್​ ಸಿಕ್ಕಿಬಿದ್ದಿದ್ದರು. ಅವರಿಂದ 20 ಸಾವಿರ ರೂ. ನಗದು ಮತ್ತು 3 ಸಾವಿರ ರೂ. ಮೌಲ್ಯದ ಫೋನ್​ ಕಿತ್ತುಕೊಂಡಿದ್ದರು. ಆದರೆ, ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸದೆ ಜೂಜುಕೋರರಿಂದ ವಶಕ್ಕೆ ಪಡೆದಿದ್ದ ಹಣವನ್ನು ಪೇದೆಗಳು ಜೇಬಿಗಿಳಿಸಿದ್ದರು. ದೂರುದಾರ ವೆಂಕಟೇಶ್​ ಠಾಣೆಗೆ ಬಂದಾಗ ಇದು ಬೆಳಕಿಗೆ ಬಂದಿತ್ತು.

    ಈ ಬಗ್ಗೆ ಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ನಾಲ್ವರು ಪೇದೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಎಸ್ಪಿ ಡಾ.ಅರುಣ್​ ಕೆ. ಮಾಹಿತಿ ನೀಡಿದ್ದಾರೆ.

    ಇನ್​ಸ್ಪೆಕ್ಟರ್ ನಂದೀಶ್ ತೀವ್ರ ಹೃದಯಾಘಾತದಿಂದ ನಿಧನ

    ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಬಂದ್​: ಮುಂದಿನ ವರ್ಷವೇ ದೇವಿಯ ದರ್ಶನ ಸಿಗೋದು

    ಮಹಡಿ ಮೇಲೆ ಒಣ ಹಾಕಿದ್ದ ಬಟ್ಟೆಗೆ ತಾಗಿದ ಪಟಾಕಿ ಕಿಡಿ: ಧಗಧಗಿಸಿದ ಮನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts