

ನವದೆಹಲಿ: ವ್ಯಕ್ತಿಯೊಬ್ಬ ತನ್ನ ಹಣೆಬರಹಕ್ಕೆ ಸವಾಲು ಎಸೆದಂತೆ ದೈತ್ಯ ಮೊಸಳೆ ಮೇಲೆ ಕುಳಿತು ಸವಾರಿ ಮಾಡಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ನಿಬ್ಬೆರಗಾಗಿದ್ದಾರೆ.
ನೀರಿನಿಂದ ಹೊರಗಿದ್ದ ಮೊಸಳೆ ಕುರಿತು ಕೆಲ ಸಮಯ ಮಾತನಾಡಿದ ವ್ಯಕ್ತಿ, ತದನಂತರ ಅದರ ಮೇಲೆ ಕುಳಿತು ಸವಾರಿ ಮಾಡುತ್ತಾನೆ. ಈ ದೃಶ್ಯವನ್ನು ತನ್ನ ಇನ್ಸ್ಟಾಗ್ರಾಮ್ನಲ್ಲಿ ಅಪಲೋಡ್ ಮಾಡಿದ್ದು, ದೃಶ್ಯ ನೋಡಿದ ನೆಟ್ಟಿಗರು ಒಮ್ಮೆ ಶಾಕ್ ಆಗಿದ್ದಾರೆ. ಈ ರೀತಿ ಸಾಹಸ ಮಾಡುವುದಕ್ಕೂ ದೈರ್ಯ ಬೇಕು ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸುವ ಮುಖೇನ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಹಲವರು ವಿಡಿಯೋ ನೋಡಿ ಅಚ್ಚರಿಗೊಂಡರೆ, ಇನ್ನು ಕೆಲವರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ದೃಶ್ಯ ಭಾರೀ ವೈರಲ್ ಆಗಿದೆ,(ಏಜೆನ್ಸೀಸ್).