More

    ಪಾಲಿಕೆ ಅಧಿಕಾರಿ ಎಂದು ನಕಲಿ ಲಸಿಕಾ ಕಾರ್ಯಕ್ರಮ ನಡೆಸಿದ! ಸಂಸದೆಯನ್ನೂ ವಂಚಿಸಿದ!

    ಕೊಲ್ಕತ : ಐಎಎಸ್​ ಅಧಿಕಾರಿಯ ಸೋಗುಹಾಕಿ ನಕಲಿ ಕರೊನಾ ಲಸಿಕಾ ಶಿಬಿರವನ್ನು ಆಯೋಜಿಸಿ ಟಿಎಂಸಿ ಸಂಸದೆ ನಟಿ ಮಿಮಿ ಚಕ್ರಬೊರ್ತಿ ಸೇರಿದಂತೆ ನೂರಾರು ಜನರಿಗೆ ವಂಚಿಸಿದ್ದ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಕೊಲ್ಕತದ ಕಸ್ಬಾ ನಿವಾಸಿ ದೇಬಂಜನ್ ದಾಸ್​ ಎಂಬುವ ಬಂಧಿತ ಆರೋಪಿ.

    ಆರೋಪಿಯು ಕೊಲ್ಕತ ಮುನಿಸಿಪಲ್ ಕಾರ್ಪೊರೇಷನ್(ಕೆಎಂಸಿ)​ನ ಜಂಟಿ ಆಯುಕ್ತ ಎಂದು ಹೇಳಿಕೊಂಡು ಲಸಿಕಾ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ಹೇಳಿದ್ದ. ಅದರಂತೆ ಜನರಿಗೆ ಪ್ರೇರಣೆ ನೀಡಲು ಸಂಸದೆ ಮಿಮಿ ಚಕ್ರಬೋರ್ತಿ ಅವರನ್ನು ಆಹ್ವಾನಿಸಿದ್ದು, ಆಕೆ ಕೂಡ ಕೋವಿಶೀಲ್ಡ್​ ಲಸಿಕೆ ಪಡೆದು ಜನರನ್ನು ಪ್ರೋತ್ಸಾಹಿಸಿದ್ದರು. ಆದರೆ ಸರ್ಕಾರದ ಕೋವಿನ್​ ಪೋರ್ಟಲ್​ನಿಂದ ಯಾವುದೇ ಸರ್ಟಿಫಿಕೇಟ್ ಬಾರದಾಗ ಕೆಎಂಸಿಯಲ್ಲಿ ವಿಚಾರಿಸಿದಾಗ ಆ ರೀತಿಯ ಅಧಿಕಾರಿ ಇಲ್ಲ ಎಂಬುದು ಗೊತ್ತಾಯಿತು ಎಂದು ಮಿಮಿ ತಮ್ಮ ದೂರಿನಲ್ಲಿ ಹೇಳಿದ್ದರು.

    ಇದನ್ನೂ ಓದಿ: ಜಿಯೋ ಸಂಸ್ಥೆಯಿಂದ ಬರಲಿದೆ ಗಣೇಶ ಚತುರ್ಥಿ ಗಿಫ್ಟ್​! ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್​ ಬಿಡುಗಡೆಗೆ ಸಿದ್ಧತೆ

    ಆರೋಪಿ ದೇಬಂಜನ್ ದೇವ್​ನನ್ನು ಗುರುತಿಸಿ ಬಂಧಿಸಿರುವ ಕೊಲ್ಕತ ಪೊಲೀಸರು, ಆತ ಈ ರೀತಿಯ ನಕಲಿ ಲಸಿಕಾ ಶಿಬಿರಗಳನ್ನು ಮುಂಚೆಯೂ ಮಾಡಿರುವನೆಂದು ತಿಳಿಸಿದ್ದಾರೆ. ಲಸಿಕಾ ಕಾರ್ಯಕ್ರಮ ನಡೆದಲ್ಲಿಂದ ಪಡೆದ ಲಸಿಕೆ ವಯಲ್​ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಆತ ಬಳಸಿದ್ದ ಕಾರನ್ನು ಜಪ್ತಿಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಸಾರಿಗೆ ಅಧಿಕಾರಿ ಮನೆಗೆ ವಿಜಿಲೆನ್ಸ್ ಅಧಿಕಾರಿಗಳ ದಾಳಿ

    ಲಸಿಕೆ ಹಾಕಿಸಿಕೊಳ್ಳಲ್ಲ ಅಂದ್ರೆ ಭಾರತಕ್ಕೆ ಇಲ್ಲ ಅಮೆರಿಕಕ್ಕೆ ಹೋಗಿ : ಫಿಲಿಪೈನ್ಸ್​ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts