ಬೈಕ್​ ಹಿಂಬದಿ ಸೀಟ್​ನಲ್ಲಿ ಪತ್ನಿ ಕೂರಿಸಿಕೊಂಡು ಅಪಾಯಕಾರಿ ಸಾಹಸ ಮಾಡಿದ ಗಂಡ: ವಿಡಿಯೋ ವೈರಲ್​

Bike Stunt
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತವೆ. ಲೈಕ್ಸ್​, ಶೇರ್​ ಮತ್ತು ಖ್ಯಾತಿ ಗಳಿಸಲು ಅನೇಕ ಮಂದಿ ಎಲ್ಲ ರೀತಿಯ ಮೂರ್ಖತನವನ್ನು ಕೆಲವೊಮ್ಮೆ ಪ್ರದರ್ಶನ ಮಾಡುತ್ತಾರೆ. ಕೆಲವರಂತೂ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೂ ಹೋಗುತ್ತಾರೆ. ಆದರೆ, ನಮ್ಮ ಜೀವವನ್ನಾಗಲಿ ಅಥವಾ ಇತರೆ ವ್ಯಕ್ತಿಗಳ ಪ್ರಾಣವನ್ನಾಗಲಿ ತೊಂದರೆಗೆ ಸಿಲುಕಿಸುವುದು ಒಳ್ಳೆಯದಲ್ಲ.

ಜಾಲತಾಣದಲ್ಲಿ ಸದ್ಯ ವಿಡಿಯೋವೊಂದು ವೈರಲ್​ ಆಗಿದೆ. ಅದರಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್​ ಹಿಂಬದಿಯಲ್ಲಿ ಪತ್ನಿಯನ್ನು ಕೂರಿಸಿ ಅಪಾಯಕಾರಿ ಸಾಹಸ ಮಾಡಿದ್ದಾನೆ. ಹೆಲ್ಮೆಟ್​ ಧರಿಸದೇ ರಾಯಲ್​ ಎನ್​ಫೀಲ್ಡ್​ ಬೈಕ್ ಸವಾರಿ ಮಾಡುವ ಮೂಲಕ ಸಂಚಾರಿ ನಿಯಮ ಉಲ್ಲಂಘಿಸಿದ್ದಲ್ಲದೆ, ಅಪಾಯಕಾರಿ ಸಾಹಸ ಮೂಲಕ ಪ್ರಾಣವನ್ನು ಪಣಕ್ಕಿಟ್ಟಿದ್ದಾನೆ. ಆತನ ಪತ್ನಿ ಸಹ ಹೆಲ್ಮೆಟ್​ ಧರಿಸಿರಲಿಲ್ಲ.

ಪತ್ನಿ ಹಿಂದೆ ಕುಳಿತುರುವಾಗ ಹ್ಯಾಂಡಲ್​ಗಳನ್ನು ಬಿಟ್ಟು, ಚಲಿಸುವ ಬೈಕ್​ ಮೇಲೆಯೇ ಎದ್ದು ನಿಂತ ಅಪಾಯಕಾರಿ ಸಾಹಸ ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು Ghantaa ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಅಪ್​ಲೋಡ್​​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. 1 ಲಕ್ಷಕ್ಕೂ ಅಧಿಕ ಲೈಕ್​ಗಳನ್ನು ಗಿಟ್ಟಿಸಿಕೊಂಡಿದೆ.

ಕಾಮೆಂಟ್​ಗಳ ಮಹಾಪೂರವೇ ಹರಿದುಬರುತ್ತಿದೆ. ಕೆಲವರು ಬೈಕ್​ ಸವಾರನ ಗಾಢನಂಬಿಕೆಯನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಬೈಕ್​ ಸವಾರನನ್ನು ಟೀಕಿಸಿದ್ದಾರೆ. ಪತ್ನಿಯ ಜೀವವನ್ನು ಪಣಕ್ಕಿಟ್ಟಿದ್ದಕ್ಕೆ ಕಿಡಿಕಾರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net