

ಐರ್ಲೆಂಡ್: ವ್ಯಕ್ತಿಯೊಬ್ಬ ರಣಹದ್ದು ಜತೆ ಪ್ಯಾರಾಗ್ಲೈಡಿಂಗ್ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ಈವರೆಗೆ 15.2 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ವ್ಯಕ್ತಿ ಜತೆ ಹಾರುವ ಈ ಹದ್ದು, ಕೊನೆಯಲ್ಲಿ ಗ್ಲೈಡರ್‌ನ ಬೂಟುಗಳನ್ನು ಕಚ್ಚುವುದು ಕಂಡುಬರುತ್ತದೆ. ಈ ವಿಡಿಯೋವನ್ನು ಟ್ವಿಟರ್ ಬಳಕೆದಾರ ಪಾಲ್ ನೆಲ್ಸನ್ ಎಂಬುವವರು ಶೇರ್ ಮಾಡಿದ್ದಾರೆ.
ಪಕ್ಷಿಗಳಿಗೆ ಪ್ಯಾರಾಗ್ಲೈಡರ್‌ಗಳೊಂದಿಗೆ ಸವಾರಿ ಮಾಡಲು ತರಬೇತಿ ನೀಡಲಾಗುತ್ತದೆ. ಹಾಗೆಯೇ ಇಲ್ಲೂ ಮಾಡಿರಬಹುದು ಎಂದು ಓರ್ವ ಟ್ವಿಟ್ಟಿಗ ಟ್ವೀಟ್ ಮಾಡಿದ್ದು, ಮತ್ತೊಬ್ಬ ಉತ್ತಮ ಅನುಭವವನ್ನು ಎಂದಿಗೂ ಹೊಂದಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಅದೇ ರೀತಿ ಅದು ಜೀವಮಾನದಲ್ಲಿ ಒಮ್ಮೆ ನಡೆಯುವ ಘಟನೆ, ಅದು ಅದ್ಭುತ ಹಾಗೂ ಮನಸ್ಸಿಗೆ ಮುದ ನೀಡುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)