More

    ‘ಕರಿಮಣಿ ಮಾಲೀಕ’ ನೀನಲ್ಲ ಎಂದು ರೀಲ್ಸ್​ ಮಾಡಿದ ಪತ್ನಿ; ಪ್ರಾಣಬಿಟ್ಟ ಪತಿ

    ಚಾಮರಾಜನಗರ: 1999ರಲ್ಲಿ ಉಪೇಂದ್ರ ನಟಿಸಿ, ನಿರ್ದೇಶಿಸಿದ ಉಪೇಂದ್ರ ಚಿತ್ರದ ಏನಿಲ್ಲ ಏನಿಲ್ಲ ಹಾಡು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇದೀಗ ಈ ಹಾಡಿನಿಂದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

    ಇತ್ತೀಚಿನ ದಿನಗಳಲ್ಲಿ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ರೀಲ್ಸ್​ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಕರಿಮಣಿ ಮಾಲೀಕ ನೀನಲ್ಲ ಎಂದು ಪತ್ನಿ ರೀಲ್ಸ್​ ಮಾಡಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಪಿಜಿ ಪಾಳ್ಯದಲ್ಲಿ ನಡೆದಿದೆ.

    ಮೃತರನ್ನು ಕುಮಾರ್​ (33) ಎಂದು ಗುರುತಿಸಲಾಗಿದ್ದು, ಇವರ ಪತ್ನಿ ರೂಪಾ ಕೆಲ ದಿನಗಳ ಹಿಂದೆ ಸಹೋದರಿ ಹಾಗೂ ಸೋದರ ಮಾವನ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂದು ರೀಲ್ಸ್​ ಮಾಡಿದ್ದರು. ಇದೇ ವಿಚಾರವಾಗಿ ದಂಪತಿಗಳ ನಡುವೆ ಜಗಳವೂ ಸಹ ಆಗಿತ್ತು. ಪತ್ನಿಯ ರೀಲ್ಸ್​ ನೋಡಿ ಕುಮಾರ್​ ಸ್ನೇಹಿತರು ಅತನನ್ನು ರೇಗಿಸಿದ್ದು, ಇದರಿಂದ ಮನನೊಂದಿದ್ದ ಕುಮಾರ್​ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts