ವಿಚ್ಛೇದನ ಆದ ಖುಷಿಗೆ ಬಂಜೀ ಜಂಪಿಂಗ್ ಮಾಡಲು ಹೋಗಿ ಕುತ್ತಿಗೆ ಮುರಿದುಕೊಂಡ!

banjee jumping
Published on

ಬ್ರೆಜಿಲ್: ತನ್ನ ವಿಚ್ಛೇದನವನ್ನು ಆಚರಿಸಲು ಬಂಜೀ ಜಂಪಿಂಗ್ ಎನ್ನುವ ಕ್ರೀಡೆ ಆಡಲು ಹೋದ ವ್ಯಕ್ತಿಯು ಹಗ್ಗ ಮುರಿದ ಕಾರಣ ಸುಮಾರು 70 ಅಡಿ ಆಳಕ್ಕೆ ಬಿದ್ದು ಕುತ್ತಿಗೆ ಮುರಿದುಕೊಂಡಿದ್ದಾನೆ. ಬ್ರೆಜಿಲ್ ದೇಶದ ಕ್ಯಾಂಪೊ ಮ್ಯಾಗ್ರೊದ ಲಗೋವಾ ಅಜುಲ್ (ಬ್ಲೂ ಲಗೂನ್) ಎಂಬ ಸ್ಥಳದಲ್ಲಿ ಬಿದ್ದಾಗ ದುರದೃಷ್ಟವಶಾತ್ ರಾಫೆಲ್ ಡೋಸ್ ಸ್ಯಾಂಟೋಸ್ ಟೋಸ್ಟಾ ಅವರ ಕುತ್ತಿಗೆ ಮತ್ತು ಸೊಂಟದ ಬಳಿಯಲ್ಲಿ ಬೆನ್ನುಮೂಳೆ ಮುರಿದಿದೆ.

ಬಂಜೀ ಜಂಪಿಂಗ್ ಎಂದೂ ಕರೆಯಬಹುದಾದ ಈ ಕ್ರೀಡೆಯಲ್ಲಿ ಎತ್ತರದ ಜಾಗದಿಂದ ಹಾರಿ ಪೆಂಡ್ಯೂಲಮ್ ರೀತಿಯಲ್ಲಿ ಜನರು ಒಂದು ಬದಿಯಿಂದ ಇನ್ನೊಂದು ಬದಿಗೆ ಓಲಾಡುತ್ತಾರೆ.

ಅದೃಷ್ಟವಶಾತ್ ಬಚಾವಾದ ರಾಫೆಲ್ ಡೋಸ್ ಸ್ಯಾಂಟೋಸ್ ಟೋಸ್ಟಾ, ಪ್ರಾದೇಶಿಕ ಮಾಧ್ಯಮಗಳಿಗೆ “ನಾನು ಯಾವಾಗಲೂ ತುಂಬಾ ಶಾಂತ ವ್ಯಕ್ತಿಯಾಗಿದ್ದೇನೆ, ಆದರೆ ಇತ್ತೀಚೆಗೆ ವಿಷಯಗಳು ಬದಲಾದವು. ಇದರಿಂದಾಗಿ ಹೀಗಾಯಿತು” ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net