More

    ಕಾರು ಕೊಡಲಿಲ್ಲವೆಂದು ಮದುವೆಯಾದ ಎರಡೇ ಘಂಟೆಗಳಲ್ಲಿ ತಲಾಖ್​

    ಆಗ್ರಾ: ವರದಕ್ಷಿಣೆಯಲ್ಲಿ ಕಾರು​ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ಮದುವೆಯಾದ ಎರಡೇ ಘಂಟೆಗಳಲ್ಲಿ ತನ್ನ ಪತ್ನಿಗೆ ತಲಾಖ್​ ನೀಡಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಈ ಸಂಬಂಧ ವಧುವಿನ ಅಣ್ಣ ಕಮ್ರಾನ್​ ವಾಸಿ ನೀಡಿದ ದೂರಿನ ಮೇರೆಗೆ ಪೊಲೀಸರು ವರ ಮೊಹಮ್ಮದ್​ ಆಸಿಫ್​ ಸೇರಿದಂತೆ ಆರು ಮಂದಿ ಪ್ರಕರಣ ದಾಖಲಿಸಿಕೊಂಡು FIR ಸಿದ್ದಪಡಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ವಧುವಿನ ಸಹೋದರ ಕಮ್ರಾನ್​ ವಾಸಿ ನನ್ನ ಇಬ್ಬರು ಸಹೋದರಿಯರಾದ ಡಾಲಿ ಹಾಗೂ ಗೌರಿಗೆ ಒಂದೇ ದಿನ ಮದುವೆಯನ್ನು ನಿಶ್ಚಯ ಮಾಡಲಾಗಿತ್ತು. ಮದುವೆಯಾದ ಬಳಿಕ ಗೌರಿ ತನ್ನ ಗಂಡನ ಮನೆಯವರ ಜೊತೆ ಹೊರಟು ಹೋಗಿದ್ದು, ಡಾಲಿಯ ಪತಿ ಮೊಹಮ್ಮದ್​ ಆಸಿಫ್​ ತನಗೆ ವರದಕ್ಷಿಣೆಯಲ್ಲಿ ಕಾರು ಕೊಡಲಿಲ್ಲ ಎಂದು ಕ್ಯಾತೆ ತೆಗೆದಿದ್ದಾನೆ.

    ಕಾರು ಕೊಡಲಿಲ್ಲವೆಂದು ಮದುವೆಯಾದ ಎರಡೇ ಘಂಟೆಗಳಲ್ಲಿ ತಲಾಖ್​

    ಇದನ್ನೂ ಓದಿ: ಯುವತಿ ಮೇಲೆ ಸಾಮೂಹಿಕ ದೌರ್ಜನ್ಯ, ಆ್ಯಸಿಡ್​ ಎರಚಿ ಹತ್ಯೆ

    ಈ ಸಂಬಂಧ ವರನ ಕಡೆಯವರು ತಗಾದೆ ತೆಗೆದಿದ್ದು, ಕಾರನ್ನು ಕೊಡಿಸುವಂತೆ ಹೇಳಿದ್ದಾರೆ. ಇಲ್ಲವಾದಲ್ಲಿ ತಕ್ಷಣವೇ ಐದು ಲಕ್ಷ ರೂಪಾಯಿ ಹಣವನ್ನು ಕೊಡುವಂತೆ ಸೂಚಿಸಿದ್ದಾರೆ. ಈ ವೇಳೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸಮಯ ಕೇಳಿದ್ದಕ್ಕಾಗಿ ಕುಪಿತಗೊಂಡ ಆತನ ಕುಟುಂಬಸ್ಥರು ಸ್ಥಳದಲ್ಲಿಯೇ ವರನ ಕಡೆಯಿಂದ ಮೂರು ಬಾರಿ ತಲಾಖ್​ ಹೇಳಿಸಿ ಹೊರಟು ಹೋಗಿದ್ದಾರೆ.

    ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರು ನೀಡಲಾಗಿದ್ದು, ವರ ಮೊಹಮ್ಮದ್​ ಅಸಿಫ್​ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ ಎಂದು ವಧುವಿನ ಸಹೋದರ ಕಮ್ರಾನ್​ ವಾಸಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts