More

    ಕರೊನಾ ಮಧ್ಯೆ ನಿಯಮ ಉಲ್ಲಂಘಿಸಿ ಸಂಭ್ರಮದಿಂದ ಪುತ್ರನ ಮದುವೆ ಮಾಡಿದವನಿಗೆ ಕಾದಿತ್ತು ಬಿಗ್​ ಶಾಕ್​…!

    ಬಿಲ್ವಾರಾ: ದೇಶದಲ್ಲಿ ಎಲ್ಲ ಕಡೆ ಕರೊನಾ ವೈರಸ್​ ಪ್ರಮಾಣ ಹೆಚ್ಚುತ್ತಿದ್ದರೂ…ಕೆಲವರ ಬೇಜವಾಬ್ದಾರಿತನ ಮಾತ್ರ ಹಾಗೇ ಇದೆ.
    ಲಾಕ್​ಡೌನ್​ ತೆರವುಗೊಳಿಸಿದ್ದರೂ, ಸಾಮಾಜಿಕ ಅಂತರ ನಿಯಮ ಪಾಲಿಸಿ, ಕಡ್ಡಾಯವಾಗಿ ಮಾಸ್ಕ್​ ಧರಿಸಿ, ಗುಂಪುಗೂಡಬೇಡಿ. ಮದುವೆ ಮತ್ತಿತರ ಸಮಾರಂಭದಲ್ಲಿ ಜಾಸ್ತಿ ಜನ ಸೇರಬೇಡಿ ಎಂಬಿತ್ಯಾದಿ ನಿಯಮಗಳನ್ನು ಸರ್ಕಾರ ಕಟ್ಟುನಿಟ್ಟಾಗಿ ಹೇರಿದೆ. ಆದರೆ ಕೆಲವರು ಕದ್ದುಮುಚ್ಚಿ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಮನಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ.

    ಇದೀಗ ರಾಜಸ್ಥಾನದಲ್ಲಿ ಕುಟುಂಬವೊಂದು ಇಂಥದ್ದೇ ಎಡವಟ್ಟು ಮಾಡಿ, ಕೊವಿಡ್​-19 ಸೋಂಕು ಹರಡಲು ಕಾರಣವಾಗಿದೆ. ಹಾಗೇ ಕರೊನಾ ನಿಯಂತ್ರಣದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ ಆ ಕುಟುಂಬಕ್ಕೆ ಬರೋಬ್ಬರಿ 6 ಲಕ್ಷ ರೂ.ದಂಡವನ್ನು ವಿಧಿಸಲಾಗಿದೆ.
    ರಾಜಸ್ಥಾನದ ಬಿಲ್ವಾರಾ ಜಿಲ್ಲೆಯ ಭಾಡಡಾ ಮೊಹಲ್ಲಾದ ನಿವಾಸಿಯಾದ ಘಿಸುಲಾಲ್​ ರಾಠಿ ಎಂಬುವರು ಜೂ.13ರಂದು ತಮ್ಮ ಪುತ್ರನ ಮದುವೆ ಸಮಾರಂಭ ನಡೆಸಿದ್ದರು. ಅದರಲ್ಲಿ 50ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು. ಆದರೆ ಕರೊನಾ ನಿಯಂತ್ರಣದ ನಿಯಮದ ಪ್ರಕಾರ ಅಷ್ಟು ಮಂದಿ ಭಾಗವಹಿಸುವಂತಿರಲಿಲ್ಲ. ಅದರಲ್ಲೂ ಅವರಿದ್ದ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: 40ನೇ ವಯಸ್ಸಲ್ಲಿ ಮೂರನೇ ಮದುವೆ!; ಮೂವರು ಮಕ್ಕಳಿರುವ ಈ ನಟಿಯ ಕಥೆ ಇದು..

    ಆದರೆ ಮದುವೆ ಮುಗಿದ ಮೂರ್ನಾಲ್ಕು ದಿನದಲ್ಲಿ ಒಂದು ಶಾಕ್​ ಕಾದಿತ್ತು. ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ 50 ಮಂದಿಯಲ್ಲಿ, 15 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಅದರಲ್ಲೂ ಓರ್ವ ವೈರಸ್​ನಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಜಿಲ್ಲಾಧಿಕಾರಿ ರಾಜೇಂದ್ರ ಭಟ್ಟ ತಿಳಿಸಿದ್ದಾರೆ. ಇದನ್ನೂ ಓದಿ: ವಿದೇಶಿ SHAREit ಬದಲು ಸ್ವದೇಶಿ Z share: ಕನ್ನಡಿಗನಿಂದ ತಯಾರಾಗಿದೆ ಹೊಸ ಆ್ಯಪ್‌

    ಇಷ್ಟೆಲ್ಲ ಅವಾಂತರವಾಗಲು ಕಾರಣರಾದ ರಾಠಿ ವಿರುದ್ಧ ಜೂ.22ರಂದು ಪ್ರಕರಣ ದಾಖಲಾಗಿದೆ. ಮದುವೆಯಲ್ಲಿ ಭಾಗವಹಿಸಿದ್ದವರನ್ನು, ಅವರ ಸಂಪರ್ಕಕ್ಕೆ ಬಂದವರನ್ನೆಲ್ಲ ಟ್ರೇಸ್​ ಮಾಡಿ ಕ್ವಾರಂಟೈನ್​ ಮಾಡಬೇಕಾಗಿರುವದರಿಂದ ಅದಕ್ಕೆ ಖರ್ಚಾಗುವ ಹಣವನ್ನು ರಾಠಿಯವರಿಂದಲೇ ರಾಜ್ಯ ಸರ್ಕಾರ ವಸೂಲು ಮಾಡಿದೆ. ಅಷ್ಟೆಲ್ಲ ನಿಯಮಗಳನ್ನು ಹೇರಿದ್ದರೂ ಎಲ್ಲವನ್ನೂ ಉಲ್ಲಂಘಿಸಿ ಮಗನ ಮದುವೆ ಮಾಡಿ, ಸೋಂಕು ಹರಡಲು ಕಾರಣರಾದ ಅವರಿಗೆ 6,26,600 ರೂ.ದಂಡ ವಿಧಿಸಲಾಗಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಹಣ ಡಿಪೋಸಿಟ್​ ಮಾಡುವಂತೆ ಅವರಿಗೆ ಸೂಚಿಸಲಾಗಿದೆ.

    ಮದುವೆಗೆ ಆಗಮಿಸಿದ್ದವರನ್ನೆಲ್ಲ ಕ್ವಾರಂಟೈನ್​, ಐಸೋಲೇಟ್​ ಮಾಡಿ, ಅವರಿಗೆ ಆಹಾರ, ತಪಾಸಣೆ, ಆಂಬುಲೆನ್ಸ್​ ವ್ಯವಸ್ಥೆಗಳನ್ನೆಲ್ಲ ಮಾಡಲು ರಾಠಿಯವರಿಗೆ ವಿಧಿಸಲಾದ ದಂಡದ ಹಣವನ್ನೇ ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)

    ಮದುವೆ ಹೆಸರಲ್ಲಿ ಶಾಮ್ನಾಗೆ ವಂಚನೆ ಪ್ರಕರಣ: ಶತ್ರು ಪಕ್ಕದಲ್ಲೇ ಇದ್ರೂ ನಟಿಗೆ ಗೊತ್ತಾಗಲಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts