ಪತ್ನಿಯ ಡ್ರೆಸ್ ಧರಿಸಿ ಡ್ಯಾನ್ಸ್ ಮಾಡಿದ ಪತಿ; ವಿಡಿಯೋ ನೋಡಿ ಎಂಜಾಯ್ ಮಾಡಿ…

video
Published on

ನವದೆಹಲಿ: ಪುರುಷನೊಬ್ಬ ತನ್ನ ಪತ್ನಿಯ ಉಡುಗೆಯನ್ನು ಧರಿಸಿ ಡ್ಯಾನ್ಸ್ ಮಾಡಿದ್ದಾನೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆದ ನಂತರ ಜನರು ಸಾಕಷ್ಟು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ರೀಲ್ಸ್​​ ಮಾಡಿ ಸೋಶಿಯಲ್​​ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಹೀಗೆ ಹಾಡಿನಲ್ಲಿ ಜೋಡಿಯೊಂದು ಡ್ಯಾನ್ಸ್ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಗಂಡ ಹೆಂಡತಿ ಇಬ್ಬರೂ ಈ ಹಾಡಿನಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ. ಆದರೆ ಪತಿ ಡ್ಯಾನ್ಸ್ ಮಾಡಲು ಆರಂಭಿಸಿದ ನಂತರ ಬಟ್ಟೆಯ ಬಣ್ಣಕ್ಕೆ ತಕ್ಕಂತೆ ಪತ್ನಿಯ ಡ್ರೆಸ್ ಧರಿಸಿ ಡ್ಯಾನ್ಸ್ ಮಾಡಿದ್ದಾರೆ.

ಈ ವೀಡಿಯೋ ವೈರಲ್ ಆದ ಕೂಡಲೇ ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ. 'ಹುಡುಗರೊಂದಿಗೆ ಪ್ರವಾಸಕ್ಕೆ ಹೋಗಲು ನಿಮ್ಮ ಹೆಂಡತಿಯಿಂದ ಅನುಮತಿ ಬೇಕಾದಾಗ' ಈ ಕ್ರಮವನ್ನು ಅನುಸರಿಸಬಹುದು, ಪತ್ನಿಗಾಗಿ ಇದೆಲ್ಲಾ ಮಾಡಬೇಕಾ? ಪ್ರೀತಿ ಹೆಚ್ಚಾಗಿದ್ಯಾ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ. ಈ ವೀಡಿಯೊವನ್ನು ಹಂಚಿಕೊಳ್ಳುವಾಗ, ' ಏನು ಬೇಕಾದರೂ ಮಾಡುತ್ತೇನೆ' ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಸುದ್ದಿ ಬರೆಯುವವರೆಗೂ 3 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net