VIDEO: ತಲೆ ಮೇಲೆ ಬೈಕ್ ಹೊತ್ತು ಬಸ್ ಮೇಲೆ ಹತ್ತಿದ ಕಾರ್ಮಿಕ! ಈತನೇ ನಿಜವಾದ ಬಾಹುಬಲಿ ಎಂದ ನೆಟ್ಟಿಗರು…

Bike
Published on

ನವದೆಹಲಿ: ಬಸ್​ಸ್ಟ್ಯಾಂಡ್​, ರೈಲ್ವೇ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಕೂಲಿ ಕಾರ್ಮಿಕರು ಶ್ರಮ ಪಟ್ಟು ಕೆಲಸ ಮಾಡುತ್ತಾರೆ. ಇದೀಗ ಕೂಲಿ ಕೆಲಸಗಾರನೊಬ್ಬ ಶ್ರಮ ವಹಿಸಿ ಕೆಲಸ ಮಾಡುತ್ತಿರುವ ವಿಡಿಯೋವೊಂದು ಟ್ವಿಟರ್​​ನಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು, ಇವರೇ ನಿಜವಾದ ಬಾಹುಬಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಬಸ್​ಸ್ಟ್ಯಾಂಡಿನಲ್ಲಿ ಕೂಲಿ ಕಾರ್ಮಿಕರು ಭಾರವಾದ ಮೂಟೆಗಳನ್ನು ಹೊತ್ತು ಸಾಗುವುದನ್ನು ನೋಡಿರುತ್ತೇವೆ. ಇನ್ನು ಕೆಲವರು ದೂರದ ಊರುಗಳಿಗೆ ಸಾಗುವ ಬಸ್ಸುಗಳ ಮೇಲೆ ಮೂಟೆ ಹೊತ್ತು ಹತ್ತುತ್ತಾರೆ. ಆದರೆ ಈತ ಮಾತ್ರ ತಲೆ ಮೇಲೆ ಬೈಕ್​ ಹೊತ್ತು, ಬಸ್ಸಿನ ಮೇಲೆ ಹತ್ತಿದ್ದಾನೆ. ಈತನ ಸಾಹಸ ನೋಡಿದ ಜನರು ಬಾಹುಬಲಿ ಎಂದು ಕರೆಯುತ್ತಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈಗಾಗಲೇ 90 ಸಾವಿರ ಜನರು ವಿಡಿಯೋ ನೋಡಿದ್ದು, 5 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ತಲೆ ಮೇಲೆ ಬೈಕ್ ಹೊತ್ತು, ಬಸ್ಸು ಹತ್ತಿದ ಈತನ ಸಾಹಸವನ್ನು ಮೆಚ್ಚಿಕೊಳ್ಳಲು ಕಾರಣ, ಬ್ಯಾಲೆನ್ಸಿಂಗ್. ತಲೆ ಮೇಲೆ ಯಾವುದೇ ವಸ್ತುವನ್ನು ಇಟ್ಟರೂ, ಸ್ವಲ್ಪ ಬ್ಯಾಲೆಂನ್ಸಿಂಗ್ ತಪ್ಪಿದರೂ ವಸ್ತು ನೆಲಕ್ಕುರುಳುತ್ತದೆ. ಈ ಸಂದರ್ಭದಲ್ಲಿ ಆಧಾರವಾಗಿ ಕೈಯ ಸಹಾಯ ಬೇಕಾಗುತ್ತದೆ. ಆದರೆ ಈತ ಮಾತ್ರ ಆಧಾರಕ್ಕೆ ಯಾವುದೇ ಸಹಾಯ ಬೇಡದೆ, ತಲೆ ಮೇಲೆ ಬೈಕ್​ ಇಟ್ಟು ಬಸ್ಸು ಹತ್ತಿದ್ದಾನೆ. ಈತನ ಸಾಹಸ ಎಲ್ಲರ ಹುಬ್ಬೇರಿಸುವಂತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net