ಆಕೆಯನ್ನು ಪಲ್ಲಂಗಕ್ಕೆ ಕರೆದ, ನಿರಾಕರಿಸಿದ್ದಕ್ಕೆ ಆಕೆಯ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿದ

Porn
Published on

ಪುಣೆ: ಕೇರಳ ಮೂಲದ ನಿರ್ದೇಶಕನೆನ್ನಲಾದ ರಾಹುಲ್ ಶ್ರೀವಾಸ್ತವ್.. ಹಿಂದಿ ಚಿತ್ರವೊಂದರಲ್ಲಿ ಪಾತ್ರ ನೀಡುವ ಮೂಲಕ ಪುಣೆಯ ಫ್ಯಾಷನ್ ಡಿಸೈನರ್ ಒಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾನೆ.
ಚಿತ್ರಕ್ಕಾಗಿ ಸ್ಕ್ರೀನ್ ಟೆಸ್ಟ್ ವೇಳೆ ಆರೋಪಿ ತನ್ನ ಚಿತ್ರಗಳನ್ನು ತೆಗೆದುಕೊಂಡು ನಂತರ ಅವುಗಳನ್ನು ಅಶ್ಲೀಲ ಚಿತ್ರಗಳಾಗಿ ಮಾರ್ಪಡಿಸಿದ್ದಾನೆ.  


ನಂತರ, ಆರೋಪಿ ಆಕೆಯ ಅಶ್ಲೀಲ ಚಿತ್ರಗಳನ್ನು ತೋರಿಸಿ ತನ್ನೊಂದಿಗೆ ಸೆಕ್ಸ್ ಮಾಡಬೇಕೆಂದು, ಇಲ್ಲದಿದ್ದರೆ ಇವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ.
ಕೇರಳ ಮೂಲದ ಆರೋಪಿ ರಾಹುಲ್ ಶ್ರೀವಾಸ್ತವ ಮತ್ತು ದೂರು ನೀಡಿದ ಸಂತ್ರಸ್ತೆ ಅಖಿಲ ಭಾರತ ಫ್ಯಾಶನ್ ಉದ್ಯಮದ ವಾಟ್ಸಾಪ್ ಗುಂಪಿನ ಸದಸ್ಯರು. ಶ್ರೀವಾಸ್ತವ ತಾನೇ ನಿರ್ದೇಶಿಸಿದ್ದು ಎಂದು ಹೇಳಿಕೊಂಡ ಚಿತ್ರವೊಂದರಲ್ಲಿ ಫ್ಯಾಶನ್ ಡಿಸೈನರ್‌ಗೆ ಒಂದು ಪಾತ್ರವನ್ನು ನೀಡಲು ಮುಂದಾಗಿದ್ದ, ಅವನು ಅವಳನ್ನು ನಗರದ ಸಾಳುಂಕೆ ವಿಹಾರ್ ಪ್ರದೇಶದ ಹೋಟೆಲ್‌ಗೆ ಕರೆದೊಯ್ದು ಸಮೀರ್ ಎಂಬಾತನಿಗೆ ಆಕೆಯನ್ನು ಭೇಟಿ ಮಾಡಿಸಿದ.


ಕೆಲವು ದಿನಗಳ ನಂತರ, ಶ್ರೀವಾಸ್ತವ ಅವಳನ್ನು ಕರೆದು ಸಮೀರ್ ಆಕೆಯ ಕೆಲಸ ಮೆಚ್ಚಿಕೊಂಡಿರುವುದಾಗಿ ಹೇಳಿದನು. ಒಪ್ಪಂದ ಮಾಡಿಕೊಳ್ಳುವ ಮೊದಲು ಸ್ಕ್ರೀನ್ ಟೆಸ್ಟ್ ನಡೆಸಬೇಕೆಂದು ಎಂದು ಹೇಳಿದ. ಸ್ಕ್ರೀನ್ ಟೆಸ್ಟ್​​​ಗಾಗಿ ಮುಂಬೈಗೆ ಬರಲು ಹೇಳಿದ. ಮಹಿಳೆ ಮುಂಬೈಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು, ಅದರ ನಂತರ ವೀಡಿಯೊ ಕಾಲ್ ಮಾಡಲಾಯಿತು. ಅದಾದ ನಂತರ ಆರೋಪಿ ವಿಡಿಯೋ ಸ್ಕ್ರೀನ್‌ಶಾಟ್‌ ತೆಗೆದುಕೊಂಡು ಅಶ್ಲೀಲ ಚಿತ್ರಗಳನ್ನಾಗಿ ಮಾಡಿದ. 


ನಂತರ ಅವನು ಆ ಚಿತ್ರಗಳನ್ನು ಮಹಿಳೆಗೆ ಕಳುಹಿಸಿದನು ಮತ್ತು ಅವಳು ಅವನೊಂದಿಗೆ ಹಾಸಿಗೆ ಹಂಚಿಕೊಳ್ಳಲು ನಿರಾಕರಿಸಿದರೆ ಅವುಗಳನ್ನು ಪ್ರಸಾರ ಮಾಡುವುದಾಗಿ ಹೇಳುವ ಮೂಲಕ ಬೆದರಿಕೆ ಹಾಕಿದನು. ನಂತರ, ಮಹಿಳೆ ಆತನ ಬೇಡಿಕೆಯನ್ನು ನಿರಾಕರಿಸಿದ್ದರಿಂದ ಅವನು ಒಂದು ಚಿತ್ರವನ್ನು ಸಾಮಾನ್ಯ ವಾಟ್ಸಾಪ್ ಗುಂಪಿಗೆ ಶೇರ್ ಮಾಡಿದ.
ಶ್ರೀವಾಸ್ತವನ ಈ ಹೀನ ಕೃತ್ಯದಿಂದ ಬೇಸತ್ತ ಆಕೆ  ಗುಂಪಿನಿಂದ ನಿರ್ಗಮಿಸಿ ಅವನ ಸಂಪರ್ಕ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾಳೆ. ಆದಾಗ್ಯೂ, ಆತ ಬೇರೆ ಬೇರೆ ಮೊಬೈಲ್ ಸಂಖ್ಯೆಗಳ ಮೂಲಕ ಆಕೆಗೆ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದಾನೆ. ಇದರಿಂದ ತೀವ್ರ ಬೇಸರಗೊಂಡ ಆಕೆ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಪೊಲೀಸರು ಆತನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ‘

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net