More

    ಪುಟ್ಟ ಮಕ್ಕಳಿಗೆ ಸ್ನಾನ ಮಾಡಿಸುವಂತೆ ಬೃಹತ್ ಗಾತ್ರದ ಕಾಳಿಂಗ ಸರ್ಪಕ್ಕೆ ಬಾತ್​ರೂಮ್​ನಲ್ಲಿ ಸ್ನಾನ ಮಾಡಿಸಿದ ವ್ಯಕ್ತಿ​…!

    Snake video viral: ಬೆಕ್ಕು, ನಾಯಿ, ಹಸು ಹೀಗೆ ಸಾಕುಪ್ರಾಣಿಗಳಿಗೆ ಸ್ನಾನ ಮಾಡಿಸುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬ ವ್ಯಕ್ತಿ ಬ್ಋಹತ್​​ ನಾಗರಹಾವಿಗೆ ಸ್ನಾ ಮಾಡಿಸಿದ್ದಾನೆ. ಈತ ಸ್ನಾನ ಮಾಡಿಸಿರೋದು ಎಲ್ಲಿ ಗೊತ್ತಾ ಮನೆಯ ವಾಶ್​ರೂಮ್​ನಲ್ಲಿ.


    ಚಿಕ್ಕ ಮಕ್ಕಳನ್ನ ನಾವು ಯಾವ ರೀತಿ ಬಚ್ಚಲು ಮನೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸುತ್ತೇವೆಯೋ ಅದೇ ರೀತಿಯಲ್ಲಿ ಈತ ಹಾವಿಗೆ ಸ್ನಾನ ಮಾಡಿಸುರುವ ವಿಡಿಯೋ ಇದೀಗ ತುಂಬಾನೆ ವೈರಲ್​ ಆಗಿದೆ.


    ಐಎಫ್​ಎಸ್​​ ಅಧಿಕಾರಿ ಸುಶಾಂತ ನಂದ ಈ ವಿಡಿಯೋವನ್ನ ತಮ್ಮ ಎಕ್ಸ್​​(ಟ್ವಿಟ್ಟರ್​​) ಖಾತೆಯಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ನೋಡುಗರ ಹುಬ್ಬೇರಿಸಿದೆ. ಜತೆಗೆ ಈ ವಿಡಿಯೋಗೆ ನೆಟ್ಟಿಗರು ನಾನಾ ರಿತಿಯಲ್ಲಿ ಕಾಮೆಂಟ್​​ಗಳನ್ನೂ ಮಾಡಿದ್ದಾರೆ.


    ಓರ್ವ ವ್ಯಕ್ತಿ ನಾನು ಪುಟ್ಟ ಮಗುವನ್ನ ಸ್ನಾನ ಮಾಡಿಸೋದನ್ನ ನೋಡಿದ್ದೆ. ಒಂದು ಬಾರಿ ಈ ವಿಡಿಯೋದಲ್ಲಿ ಹಾವನ್ನ ಕಂಡು ಶಾಕ್​ ಆಯ್ತು ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ ಹಾವಿಗೆ ಸ್ನಾನ ಮಾಡಿಸುತ್ತಿರುವ ವ್ಯಕ್ತಿಯ ಧೈರ್ಯವನ್ನ ಮೆಚ್ಚಲೇ ಬೇಕು ಎಂದಿದ್ದಾರೆ.


    ವ್ಯಕ್ತಿ ಬಕೆಟ್​​ನಲ್ಲಿದ್ದ ನೀರನ್ನು ತೆಗೆದು ಹಾವಿನ ತಲೆಯ ಮೇಲೆ ಹಾಕಿದ್ದು, ಹಾವು ಕೂಡ ಪುಟ್ಟ ಮಗುವಿನಂತೆ ಸ್ನಾ ಮಾಡಿಸಿಕೊಂಡಿದೆ. ವಿಷಕಾರಿ ಹಾವಿಗೆ ಸ್ನಾನ ಮಾಡಿಸುವುದು ಎಷ್ಟು ಸುರಕ್ಷಿತ ಇಂತಹ ದುಸ್ಸಾಹಸ ಬೇಕಿತ್ತಾ ಎಂದು ಸಾಕಷ್ಟು ಮಂದಿ ಪ್ರಶ್ನಿಸಿದ್ದಾರೆ.


    ಈ ವಿಡಿಯೋ ಶೇರ್​​ ಮಾಡಿದಾಗಿಂದಲೂ ಇಲ್ಲಿಯವರೆಗೆ 10 ಸಾವಿರಕ್ಕೂ ಹೆಚ್ಚು ವೀಕ್ಷಣೆಯನ್ನ ಗಳಿಸಿದ್ದು, ಹಾವುಗಳು ತಮಗೆ ಬೇಖಾದಾಗ ಪೊರೆ ಬಿಟ್ಟುಕೊಳ್ಳುತ್ತೆ ಹಾಗಾಗಿ ಅವುಗಳಿಗೆ ಸ್ನಾನವೇ ಬೇಡ ಎಂಬ ಅಭಿಪ್ರಾಯವನ್ನೂ ವ್ಯಕ್ತ ಪಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts