

ಉತ್ತರಪ್ರದೇಶ: ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕುರಿತು ಅವಹೇಳನಕಾರಿ ಕಾಮೆಂಟ್ ಮಾಡಿದ್ದ ವ್ಯಕ್ತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಕೋಟ್ವಾಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಜಯ್ ಕುಮಾರ್ ಸೇಠ್ ಮಾತನಾಡಿ, "ಆಗಸ್ಟ್ 4 ರಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಕಾಮೆಂಟ್ ಬಹಳ ವೈರಲ್ ಆಗಿತ್ತು. ಬಂಧಿತ ವ್ಯಕ್ತಿಯನ್ನು ಸಹಾಬುದ್ದೀನ್ ಅನ್ಸಾರಿ ಎಂದು ಗುರುತಿಸಲಾಗಿದ್ದು, ಟ್ವಿಟರ್ ಮೂಲಕ ನಾವು ದೂರನ್ನು ಸ್ವೀಕರಿಸಿದೆವು. ಕಾಮೆಂಟ್‌ನ ಸ್ಕ್ರೀನ್‌ಶಾಟ್ ಕೂಡ ಪಡೆಯಲಾಗಿದೆ" ಎಂದು ಅಧಿಕಾರಿಗಳು ಹೇಳಿದರು.
"ದೂರಿನ ಆಧಾರದ ಮೇಲೆ ಸಹಾಬುದ್ದೀನ್ ಅನ್ಸಾರಿ ವಿರುದ್ಧ ಐಪಿಸಿ, ಐಟಿ ಕಾಯ್ದೆ ಮತ್ತು ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, "ವಾಟ್ಸ್ಆ್ಯಪ್ ಗ್ರೂಪ್‌ನ ಹೆಸರು 'ನಗರ ಪಾಲಿಕೆ ಪರಿಷತ್ ಭಡೋಹಿ' ಎಂದು. ಇದು ಭಡೋಹಿಯ ನಗರ ಪಾಲಿಕೆ ಪರಿಷತ್ತಿನ ಬಹುತೇಕ ಎಲ್ಲಾ ಕಾರ್ಪೊರೇಟರ್‌ಗಳು ಮತ್ತು ಸಾರ್ವಜನಿಕರನ್ನು ಹೊಂದಿರುವ ಗ್ರೂಪ್ ಆಗಿತ್ತು" ಎಂದು ಹೇಳಿದರು.
"ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಈ ಗ್ರೂಪ್ ಅನ್ನು ತೆರೆಯಲಾಗಿತ್ತು. ಇದು ಕಾರ್ಪೊರೇಟರ್‌ಗಳ ಅಧಿಕೃತ ವಾಟ್ಸ್ಆ್ಯಪ್ ಗ್ರೂಪ್ ಅಲ್ಲ" ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).