More

    ಕೇಂದ್ರದ ವಿರುದ್ಧ ದೀದಿ ಕಾನೂನು ಹೋರಾಟ

    ಕೋಲ್ಕತ: ಪಶ್ಚಿಮ ಬಂಗಾಳದ ಮೂವರು ಪೊಲೀಸ್ ಅಧಿಕಾರಿಗಳನ್ನು ಕೇಂದ್ರದ ಸೇವೆಗೆ ನಿಯೋಜನೆ ಮಾಡುವ ಆದೇಶದ ವಿರುದ್ಧ ಮಮತಾ ಬ್ಯಾನರ್ಜಿ ಸರ್ಕಾರ, ಸುಪ್ರೀಂ ಕೋರ್ಟ್​ಗೆ ಮೊರೆ ಹೋಗಲು ನಿರ್ಧರಿಸಿದೆ. ಡಿ. 10ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರ ವಾಹನ ಮೇಲೆ ನಡೆದ ದಾಳಿಯ ನಂತರ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮುಖ್ಯಸ್ಥರನ್ನು ಚರ್ಚೆಗಾಗಿ ದೆಹಲಿಗೆ ಕಳಿಸುವಂತೆ ಕೇಂದ್ರ ಸರ್ಕಾರ ನೀಡಿದ್ದ ಸೂಚನೆಯನ್ನು ಟಿಎಂಸಿ ಸರ್ಕಾರ ನಿರ್ಲಕ್ಷಿಸಿತ್ತು. ಅದರ ಬೆನ್ನಲ್ಲೇ, ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜನೆಗಾಗಿ ತಕ್ಷಣವೇ ಬಿಡುಗಡೆ ಮಾಡಬೇಕೆಂಬ ಗೃಹ ಸಚಿವಾಲಯದ ನಿರ್ದೇಶನಕ್ಕೂ ಮಮತಾ ಸರ್ಕಾರ ಸೊಪು್ಪ ಹಾಕದೆ ಕೇಂದ್ರದೊಂದಿಗೆ ಸಂಘರ್ಷಕ್ಕೆ ಇಳಿದಿತ್ತು. ಈಗ ಕಾನೂನಾತ್ಮಕ ಹೋರಾಟಕ್ಕೆ ಬಂಗಾಳ ಸರ್ಕಾರ ಸಿದ್ಧವಾಗಿದೆ.

    ಇನ್ನಿಬ್ಬರು ಟಿಎಂಸಿ ನಾಯಕರ ರಾಜೀನಾಮೆ: ಬ್ಯಾರಕ್​ಪುರದ ಟಿಎಂಸಿ ಶಾಸಕ ಶಿಲಾಭದ್ರ ದತ್ತ ಹಾಗೂ ಟಿಎಂಸಿ ಅಲ್ಪಸಂಖ್ಯಾತರ ಘಟಕದ ನಾಯಕ ಕಬೀರುಲ್ ಇಸ್ಲಾಂ ಶುಕ್ರವಾರ ರಾಜೀನಾಮೆ ನೀಡಿದ್ದು ಪಕ್ಷಕ್ಕೆ ಭಾರಿ ಹೊಡೆತ ಬಿದ್ದಿದೆ. ಇತ್ತೀಚೆಗೆ ಶಾಸಕ ಸುವೇಂದು ಅಧಿಕಾರಿ ಮತ್ತು ಅಸನ್ಸೋಲ್ ನಗರಸಭೆ ಅಧ್ಯಕ್ಷ ಜಿತೇಂದ್ರ ತಿವಾರಿ ಕೂಡ ಪಕ್ಷ ತೊರೆದಿದ್ದು ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಟಿಎಂಸಿ ಭಾರಿ ಹಿನ್ನಡೆ ಅನುಭವಿಸಿದೆ.

    ಇದನ್ನೂ ಓದಿ: ಹರಾಜಿನ ಮೂಲಕ ನಡೆದಿದ್ದ ಅವಿರೋಧ ಆಯ್ಕೆ ಅಸಿಂಧು! ಗೆದ್ದಂತೆ ಬೀಗುತ್ತಿದ್ದವರಿಗೆ ಶಾಕ್​

    ಅಂಗೀಕಾರವಾಗದ ರಾಜೀನಾಮೆ: ಸುವೇಂದು ಅಧಿಕಾರಿ ನೀಡಿರುವ ರಾಜೀನಾಮೆಯನ್ನು ಸ್ಪೀಕರ್ ಬಿಮನ್ ಬ್ಯಾನರ್ಜಿ ಅಂಗೀಕರಿಸಿಲ್ಲ. ರಾಜೀನಾಮೆ ಪತ್ರದಲ್ಲಿ ದಿನಾಂಕ ನಮೂದಿಸಿಲ್ಲ. ಕೆಲವು ವಿವರಗಳು ಸಂವಿಧಾನದ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಬ್ಯಾನರ್ಜಿ ಹೇಳಿದ್ದಾರೆ. ಡಿಸೆಂಬರ್ 21ರಂದು ತಮ್ಮ ಮುಂದೆ ಹಾಜರಾಗುವಂತೆ ಸುವೇಂದುಗೆ ಸ್ಪೀಕರ್ ಸೂಚಿಸಿದ್ದಾರೆ.

    ಸುವೇಂದುಗೆ ಭದ್ರತೆ: ಟಿಎಂಸಿ ತೊರೆದು ಬಿಜೆಪಿ ಸೇರಲು ಸಜ್ಜಾಗಿರುವ ಸುವೇಂದು ಅಧಿಕಾರಿಗೆ ಕೇಂದ್ರ ಗೃಹ ಸಚಿವಾಲಯ ಝುಡ್ ಶ್ರೇಣಿಯ ಭದ್ರತೆ ಒದಗಿಸಿದೆ. ಬಂಗಾಳದಲ್ಲಿ ಝೆಡ್ ಶ್ರೇಣಿ ಹಾಗೂ ಇತರ ರಾಜ್ಯಗಳಲ್ಲಿ ವೈ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಲಾಗುತ್ತದೆ.

    ಇದನ್ನೂ ಓದಿ: ಹೊಸ ವರ್ಷದಿಂದ ಫಾಸ್​ಟ್ಯಾಗ್​ ಕಡ್ಡಾಯ; ರದ್ದಾಗಲಿದೆ ನಗದು ಶುಲ್ಕ ಪಾವತಿ ಪಥ…

    ಬಿಜೆಪಿ ನಾಯಕರಿಗೆ ಸುಪ್ರೀಂ ರಕ್ಷಣೆ

    ಪಶ್ಚಿಮ ಬಂಗಾಳದಲ್ಲಿ ನಡೆದ ರಾಜಕೀಯ ಹಿಂಸಾಚಾರಕ್ಕೆ ಸಂಬಂಧಿಸಿ ಮುಕುಲ್ ರಾಯ್, ಸಂಸದ ಕೈಲಾಶ್ ವಿಜಯವರ್ಗೀಯ ಸಹಿತ ಏಳು ಬಿಜೆಪಿ ನಾಯಕರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ರಕ್ಷಣೆ ನೀಡಿದೆ. ಮುಂದಿನ ವಿಚಾರಣೆ ವರೆಗೆ ಅವರ ಬಂಧನ ಅಥವಾ ಇನ್ನಾವುದೇ ಕ್ರಮ ಕೈಗೊಳ್ಳದಂತೆ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶಿಸಿದೆ. ಬಿಜೆಪಿ ನಾಯಕರು ಸಲ್ಲಿಸಿರುವ ಐದು ಪ್ರತ್ಯೇಕ ಅರ್ಜಿಗಳ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆಯೂ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ರಾಜ್ಯಕ್ಕೆ ಸೂಚಿಸಿದೆ. ತೃಣ ಮೂಲ ಕಾಂಗ್ರೆಸ್ (ಟಿಎಂಸಿ) ಕುಮ್ಮಕ್ಕಿನಿಂದ ರಾಜ್ಯ ಪೊಲೀಸರು ಸೇಡಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ರಾಯ್ ಮತ್ತು ಇತರ ಆರು ನಾಯಕರು ಕೋರ್ಟ್ ಮೊರೆ ಹೋಗಿದ್ದರು. ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಮೊಕದ್ದಮೆಗಳನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ಒಪ್ಪಿಸುವಂತೆ ಮನವಿ ಮಾಡಿದ್ದರು.

    ಲೂಸ್​ ಪ್ಯಾಕೆಟ್​ಗಳಲ್ಲಿ ಈ ರಾಜ್ಯದಲ್ಲಿ ಇನ್ಮುಂದೆ ಎಣ್ಣೆ ಮಾರಾಟವಿಲ್ಲ- ಇದು ಹೈಕೋರ್ಟ್​ ಆದೇಶ

    ಹಾಥರಸ್​ ರೇಪ್​ ಕೇಸ್​: ​ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್​ಷೀಟ್​- ಅಧಿಕಾರಿಗಳು ಹೇಳಿರುವುದೇನು?

    ವಾಟ್ಸ್​ಆ್ಯಪ್​ ವೆಬ್​ನಲ್ಲಿ ಇದು ಸಿಕ್ಕಿದ್ದರೆ ನೀವು ಲಕ್ಕಿನೇ; ಸಿಗದಿದ್ದವರಿಗೆ ಚಿಂತೆ ಬೇಡ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts