More

    ಹರಾಜಿನ ಮೂಲಕ ನಡೆದಿದ್ದ ಅವಿರೋಧ ಆಯ್ಕೆ ಅಸಿಂಧು! ಗೆದ್ದಂತೆ ಬೀಗುತ್ತಿದ್ದವರಿಗೆ ಶಾಕ್​

    ಬಳ್ಳಾರಿ: ಲೋಕಲ್​ ವಾರ್​ ಎಂದೇ ಪರಿಗಣಿಸಲ್ಪಟ್ಟ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟ ಹಲವರು ಮತದಾನಕ್ಕೂ ಮುನ್ನವೇ ಅವಿರೋಧ ಆಯ್ಕೆಯಾಗಲು ನಾನಾ ತಂತ್ರ ಹೆಣೆದಿದ್ದಾರೆ. ಕೆಲವರು ಗ್ರಾಪಂ ಸದಸ್ಯ ಸ್ಥಾನವನ್ನ ಊರಿನ ಮುಖಂಡರ ಸಮ್ಮುಖದಲ್ಲಿ ಲಕ್ಷಾಂತರ ರೂಪಾಯಿಗೆ ಹರಾಜಿನ ಮೂಲಕ ಬುಕಿಂಗ್​ ಮಾಡಿಕೊಂಡಿದ್ದಾರೆ. ಅಂತಹವರಿಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸುತ್ತಿದೆ. ಅದರ ಮುಂದುವರಿದ ಭಾಗ ಇದು.

    ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಸಿಂದಗೇರಿ ಗ್ರಾಮ ಪಂಚಾಯಿತಿಗೆ ಹರಾಜು ಮೂಲಕ ಅವಿರೋಧ ಆಯ್ಕೆ ಆಗಿದ್ದ 13 ಅಭ್ಯರ್ಥಿಗಳನ್ನು ಅಸಿಂಧು ಮಾಡಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಇದನ್ನೂ ಓದಿರಿ ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

    ಸಿಂದಗೇರಿ ಗ್ರಾಪಂಗೆ ಮೊದಲ ಹಂತದಲ್ಲಿ ಅಂದರೆ ಡಿ. 22 ರಂದು ಮತದಾನ ನಡೆಯಬೇಕಿತ್ತು.‌ ಆದರೆ ಬೈಲೂರು ಗ್ರಾಮದ 13 ಸದಸ್ಯ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿತ್ತು. ಮಾರಮ್ಮ‌ ದೇವಸ್ಥಾನ ನಿರ್ಮಾಣಕ್ಕೆ ಹಣ ನೀಡುವವರನ್ನು ಅವಿರೋಧ ಆಯ್ಕೆ ಮಾಡಲು ಗ್ರಾಮಸ್ಥರು ಒಪ್ಪಿದ್ದರು. ಹರಾಜಿನ‌ ಮೂಲಕ ಒಟ್ಟು 51.20 ಲಕ್ಷ ರೂಪಾಯಿಗೆ 13 ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಜಿಲ್ಲಾಡಳಿತ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

    ಹಣ ಬಲದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವಂತೆ ಗ್ರಾಪಂ ಸದಸ್ಯ ಸ್ಥಾನ ಖರೀದಿಸಿ ಗೆದ್ದಂತೆ ಬೀಗುತ್ತಿದ್ದವರಿಗೀಗೆ ನಡುಕು ಶುರುವಾಗಿದೆ.

    ನಾನು 110 ಕೆಜಿ ಇದ್ದೇನೆ, ಕಾಂಗ್ರೆಸ್​ಗೆ ನನ್ನನ್ನು ತುಳಿಯೋಕೆ ಆಗಲ್ಲ ಎನ್ನುತ್ತಲೇ ಜೆಡಿಎಸ್​ಗೆ ಇಬ್ರಾಹಿಂ ಎಂಟ್ರಿ!

    ಹಳ್ಳಿ ಫೈಟ್​: ಈ ಊರಲ್ಲಿ ಒಂದೇ ದಿನ 125 ಜನರಿಂದ ನಾಮಪತ್ರ ಸಲ್ಲಿಕೆ, ಮಧ್ಯರಾತ್ರಿಯೂ ಕ್ಯೂ ನಿಂತ ಅಭ್ಯರ್ಥಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts