More

    ಹಾಥರಸ್​ ರೇಪ್​ ಕೇಸ್​: ​ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್​ಷೀಟ್​- ಅಧಿಕಾರಿಗಳು ಹೇಳಿರುವುದೇನು?

    ಲಖನೌ: ಕಳೆದ ಸೆಪ್ಟೆಂಬರ್​ 14ರಂದು ಉತ್ತರ ಪ್ರದೇಶದ ಹಾಥರಸ್​ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ (ಚಾರ್ಜ್​ಷೀಟ್​) ಸಲ್ಲಿಸಿದೆ.

    ದೇಶಾದ್ಯಂತ ಈ ಸಾವಿನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು. ಘಟನೆಯಿಂದಾಗಿ ಭಾರಿ ಹಲ್ಲೆಗಳಗಾಗಿದದ ಯುವತಿ ಸೆಪ್ಟೆಂಬರ್​ 30ರಂದು ಮೃತಪಟ್ಟಿದ್ದಾಳೆ.
    ಈ ನಡುವೆಯೇ ಪೊಲೀಸರು ಮೃತದೇಹವನ್ನು ರಾತ್ರೋರಾತ್ರಿ ಸುಟ್ಟಿದುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಪೊಲೀಸರು ಕೂಡ ಇದು ಅತ್ಯಾಚಾರದ ಆರೋಪ ಎಂಬುದನ್ನು ಆರಂಭದಲ್ಲಿ ನಿರಾಕರಿಸಿದ್ದರು.

    ಇವೆಲ್ಲಾ ಬೆಳವಣಿಗೆಯ ನಂತರ ಎರಡು ತಿಂಗಳವರೆಗೆ ಸುದೀರ್ಘ ತನಿಖೆ ಕೈಗೊಂಡ ಸಿಬಿಐ, ಮೃತ ಯುವತಿಯ ಅಂತಿಮ ಹೇಳಿಕೆಗಳು ಹಾಗೂ ವೈದ್ಯರು ಕೆಲವೊಂದು ದಾಖಲೆಗಳನ್ನು ಪರಿಶೀಲಿಸಿ ಇದೀಗ ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್​ಷೀಟ್​ ಸಲ್ಲಿಸಿದೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಸಲಹೆ ಮೇರೆಗೆ ತನಿಖೆ ಕೈಗೊಂಡಿರುವ ನಾವು ಈ ಚಾರ್ಜ್​ಷೀಟ್​ ಸಲ್ಲಿಸುತ್ತಿದ್ದೇವೆ. ಯುವತಿಯ ಅಂತಿಮ ಹೇಳಿಕೆ ಮಾತ್ರವಲ್ಲದೇ, ಯುವತಿಗೆ ಚಿಕಿತ್ಸೆ ನೀಡಿರುವ ವೈದ್ಯರಿಂದ ಪಡೆದುಕೊಂಡಿರುವ ಮಾಹಿತಿ, ಸ್ಥಳದಲ್ಲಿ ಸಿಕ್ಕಿರುವ ಸಾಕ್ಷ್ಯಗಳ ಆಧಾರದ ಮೇಲೆ ಈ ಚಾರ್ಜ್​ಷೀಟ್​ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಾಂಧಿನಗರದ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದಲ್ಲಿ ವಿವಿಧ ವಿಧಿವಿಜ್ಞಾನ ಪರೀಕ್ಷೆಗಳ ಮೂಲಕ ಒಳಪಡಿಸಿದ ನಾಲ್ವರ ಪಾತ್ರವನ್ನು ಕೂಡ ಪರಿಶೀಲಿಸಿರುವ ಕುರಿತು ವಿವರಣೆ ನೀಡಿದ್ದಾರೆ.

    ಎಸ್‌ಸಿ ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ವಿಶೇಷ ವರದಿಯನ್ನು ಸಲ್ಲಿಸಿದ್ದು, ಅದರಲ್ಲಿ ಅತ್ಯಾಚಾರ ಪ್ರಕರಣದ ಸೆಕ್ಷನ್ 376 ಡಿ, ಕೊಲೆ ಪ್ರಕರಣದ ಸೆಕ್ಷನ್ 302, ಸೆಕ್ಷನ್ 354 ಹಾಗೂ ಸೆಕ್ಷನ್ 376 ಎಗಳ ಅಡಿ ಆರೋಪಿಗಳಾದ ಸಂದೀಪ್, ಲವಕುಶ್, ರವಿ ಮತ್ತು ರಾಮು ವಿರುದ್ಧ ಪ್ರಕರಣಗಳನ್ನು ದಾಖಲಿಸಿರುವುದಾಗಿ ಅವರು ಹೇಳಿದ್ದಾರೆ.

    ಎಲ್ಲ ನಾಲ್ವರು ಆರೋಪಿಗಳನ್ನು ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾಗಿದೆ ಎಂದು ಆರೋಪಿಗಳ ಪರ ವಕೀಲ ಮುನ್ನಾ ಸಿಂಗ್ ಪುಂಧಿರ್ ಹೇಳಿದ್ದಾರೆ. ವಿಶೇಷ ಎಸ್‌ಸಿ-ಎಸ್‌ಟಿ ನ್ಯಾಯಾಲಯಕ್ಕೆ ಸಿಬಿಐ ತನ್ನ ವರದಿಯನ್ನು ಸಲ್ಲಿಸಿದೆ. ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಅವರ ವಿರುದ್ಧ ತನಿಖೆ ಮುಂದುವರೆದಿದೆ.

    ರೈತರನ್ನು ಉದ್ದೇಶಿಸಿ ಪ್ರಧಾನಿ ಭಾಷಣ- 23 ಸಾವಿರ ಗ್ರಾಮಗಳಲ್ಲಿ ಆಲಿಕೆ: ಮೋದಿ ಹೇಳಿದ್ದೇನು?

    ಬಿಬಿಎಂಪಿ ಚುನಾವಣೆ: ಹೈಕೋರ್ಟ್​ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್​

    ಸಲಾಡ್​ಗೆ ಈರುಳ್ಳಿ ಕೊಡು ಎಂದರೆ ಕರುಳು ಹೊರ ಬರುವಂತೆ ಚಾಕುವಿನಿಂದ ಇರಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts