'ವೀಲ್​ ಚೇರ್​ ಮೇಲೆ ಕುಳಿತಾದರೂ ಪ್ರಚಾರ ಮಾಡ್ತೀನಿ' ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ ಹರಿಬಿಟ್ಟ ದೀದಿ

mamtha
Published on

ಕೋಲ್ಕತ: ಪಶ್ಚಿಮ ಬಂಗಾಳದ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಆದರೆ ಬಸವಳಿಯದ ಅವರು ಚುನಾವಣಾ ಪ್ರಚಾರಕ್ಕೆ ವೀಲ್​ಚೇರ್​ನಲ್ಲೇ ಬರುವುದಾಗಿ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ಕೋಲ್ಕತದ ಎಸ್​ಎಸ್​ಕೆಎಂ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಮತಾ ಬ್ಯಾನರ್ಜಿ ವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ತಾಳ್ಮೆ ಕಳೆದುಕೊಂಡು, ಸಾರ್ವಜನಿಕರಿಗೆ ಹಾನಿಯಾಗುವಂತಹ ಕೆಲಸ ಮಾಡಬಾರದು. ಶಾಂತವಾಗಿರಿ. ನಾನು ಇನ್ನು ಎರಡು ಮೂರು ದಿನಗಳಲ್ಲಿ ಪ್ರಚಾರಕ್ಕೆ ವಾಪಾಸಾಗುತ್ತೇನೆ. ಕೆಲ ದಿನಗಳ ಕಾಲ ವೀಲ್​ ಚೇರ್​ ಮೇಲೆ ಕುಳಿತೇ ಪ್ರಚಾರ ಮಾಡಬೇಕಾಗಬಹುದು. ಆದರೆ ನಾನು ಯಾವುದೇ ಸಭೆಗಳನ್ನು ಮಿಸ್​ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಮಮತಾ ಅವರ ಎಡ ಪಾದ, ಕಾಲಿನ ಮೂಳೆ ಮುರಿದಿರುವುದಾಗಿ ಹೇಳಲಾಗಿದೆ. ಕತ್ತಿನ ಭಾಗದಲ್ಲೂ ಸ್ವಲ್ಪ ಗಾಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net