More

    ‘ಜೈ ಶ್ರೀರಾಮ್​ ಘೋಷಣೆ’ ಕೇಳಿ ವೇದಿಕೆ ಮೇಲೆ ಕೂರಲು ನಿರಾಕರಿಸಿದ ಮಮತಾ ಬ್ಯಾನರ್ಜಿ..!

    ನವದೆಹಲಿ: ಪಶ್ಚಿಮ ಬಂಗಾಳದ ಹೌರಾ ನಿಲ್ದಾಣದಲ್ಲಿ ಶುಕ್ರವಾರದಂದು ಹೈಡ್ರಾಮಾ ನಡೆದಿದ್ದು ಅಲ್ಲಿ ಆಹ್ವಾನಿತ ಜನರ ಒಂದು ಗುಂಪು “ಜೈ ಶ್ರೀ ರಾಮ್” ಎಂದು ಘೋಷಣೆಗಳನ್ನು ಕೂಗತೊಡಗಿದೆ. ಇದರಿಂದ ಸಿಟ್ಟಾದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವೇದಿಕೆಯ ಮೇಲೆ ಕುಳಿತುಕೊಳ್ಳಲು ನಿರಾಕರಿಸಿದರು.

    ಕಾರ್ಯಕ್ರಮದಲ್ಲಿ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನ್ಯೂ ಜಲ್​ಪಾಯ್​ಗುರಿಗೆ ಲಾಂಚ್​ ಮಾಡಲಾಗುತ್ತಿತ್ತು. ಈ ಸಂದರ್ಭ ಘಟನೆ ನಡೆದ ಕಾರಣ ವೇದಿಕೆಯ ಮೇಲೆ ಹತ್ತಲು ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ.

    ಈ ಹಿಂದೆ ಬಿಜೆಪಿ ಬೆಂಬಲಿಗರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗೆ ಸವಾಲೆಸೆಯಲು “ಜೈ ಶ್ರೀ ರಾಮ್” ಘೋಷಣೆಗಳನ್ನು ಬಳಸಿದ್ದರಿಂದ, ಮಮತಾ ಬ್ಯಾನರ್ಜಿ ಅಸಮಾಧಾನಗೊಂಡಿದ್ದಾರೆ.

    ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯಪಾಲ, ಸಿವಿ ಆನಂದ ಬೋಸ್, ಅವರನ್ನು ಸಮಾಧಾನಪಡಿಸಲು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಕಡೆಗೆ ಮಮತಾ ಬ್ಯಾನರ್ಜಿ ಪ್ರೇಕ್ಷಕರೊಂದಿಗೆ ಕುಳಿತುಕೊಳ್ಳಲು ನಿರ್ಧರಿಸಿದ್ದಾರೆ.

    ಇದೇ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ತಮ್ಮ ತಾಯಿ ಹೀರಾಬೆನ್ ಮೋದಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂತಾಪ ಸೂಚಿಸಿದ್ದಾರೆ. ‘ಗೌರವಾನ್ವಿತ ಪ್ರಧಾನಿಗಳೇ, ಇಂದು ನಿಮಗೆ ದುಃಖದ ದಿನ. ನಾನು ದೇವರು ನಿಮಗೆ ಶಕ್ತಿಯನ್ನು ನೀಡಲಿ ಎಮದು ಪ್ರಾರ್ಥಿಸುತ್ತೇನೆ. ನೀವು ಪಶ್ಚಿಮ ಬಂಗಾಳಕ್ಕೆ ಬರಬೇಕಿತ್ತು. ಆದರೆ ನಿಮ್ಮ ತಾಯಿಯ ನಿಧನದಿಂದಾಗಿ ನೀವು ಬರಲು ಸಾಧ್ಯವಾಗಲಿಲ್ಲ. ನೀವು ವರ್ಚುವಲ್​ ರೂಪದಲ್ಲಿ ಸೇರಿಕೊಂಡಿದ್ದಕ್ಕಾಗಿ ನಾನು ನಿಮಗೆ ನನ್ನ ಕೃತಜ್ಞತೆಯನ್ನು ತಿಳಿಸುತ್ತೇನೆ’ ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts