ಕಾರು ಅಪಘಾತದಲ್ಲಿ ಮೃತಪಟ್ಟ ಮಲಯಾಳಂ ನಟ ಕೊಲ್ಲಂ ಸುಧಿ; ಕಂಬನಿ ಮಿಡಿದ ಚಿತ್ರರಂಗ!

actor died
car crash
Published on

ಕೇರಳ: ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯ ನಟ ಕೊಲ್ಲಂ ಸುಧಿ ಅವರು ಇಂದು ಮುಂಜಾನೆ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಮ್ಮ ನೆಚ್ಚಿನ ಕಲಾವಿದನನ್ನು ಕಳೆದುಕೊಂಡ ಚಿತ್ರರಂಗದ ಅನೇಕ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:

ತಮ್ಮ 39ನೇ ವಯಸ್ಸಿನಲ್ಲಿ ನಟ ಕೊಲ್ಲಂ ಸುಧಿ ವಿಧಿವಶರಾಗಿದ್ದಾರೆ. ನಟ ಕೊಲ್ಲಂ ಸುಧಿ ತಮ್ಮ ಮೂವರು ಸ್ನೇಹಿತರೊಡನೆ ಪ್ರಯಾಣಿಸುತ್ತಿದ್ದ ಕಾರು ಸೋಮವಾರ ಮುಂಜಾನೆ ಕೇರಳದ ತ್ರಿಶೂರ್‌ನಲ್ಲಿ ಅಪಘಾತಕ್ಕೀಡಾಗಿದೆ. ನಟ ಕೊಲ್ಲಂ ಅವರೊಡನೆ ಪ್ರಯಾಣಿಸುತ್ತಿದ್ದ ಮೂವರು ಕಲಾವಿದರು ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


"ಸೋಮವಾರ ಮುಂಜಾನೆ 4.30ಕ್ಕೆ ಕೈಪಮಂಗಲಂನಲ್ಲಿ ಕೊಲ್ಲಂ ಸುಧಿ, ಉಲ್ಲಾಸ್ ಅರೂರ್, ಬಿನು ಅಡಿಮಾಲಿ ಮತ್ತು ಮಹೇಶ್ ಪ್ರಯಾಣಿಸುತ್ತಿದ್ದ ಕಾರು ಟ್ರಕ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಟ್ರಕ್​ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಗಂಭೀರ ಗಾಯಗೊಂಡಿದ್ದಾರೆ. ಶೀಘ್ರವೇ ನಾಲ್ವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ಕೊಲ್ಲಂ ಸುಧಿ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಉಳಿದ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಪೊಲೀಸರು ಸ್ಥಳೀಯ ಸುದ್ದಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net