ಚಂದನವನಕ್ಕೆ ‘ರಾಧಾ ಕೃಷ್ಣ’ ಧಾರಾವಾಹಿಯ ರಾಧೆಯ ಎಂಟ್ರಿ … ವಿನಯ್ ರಾಜಕುಮಾರ್​​ಗೆ ಮಲ್ಲಿಕಾ ಸಿಂಗ್ ನಾಯಕಿ

Mallika Singh
Published on

ಬೆಂಗಳೂರು: ಹಿಂದಿಯ ಜನಪ್ರಿಯ ಧಾರಾವಾಹಿ ‘ರಾಧಾ ಕೃಷ್ಣ’ ದಲ್ಲಿ ರಾಧೆಯ ಪಾತ್ರ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು ನಟಿ ಮಲ್ಲಿಕಾ ಸಿಂಗ್​. ಈಗ ಅವರು ಕನ್ನಡ ಚಿತ್ರರಂಗಕ್ಕೆ ಸದ್ದಿಲ್ಲದೆ ಎಂಟ್ರಿ ಕೊಟ್ಟಿದ್ದಾರೆ.

ಸಿಂಪಲ್​ ಸುನಿ ನಿರ್ದೇಶನದ 'ಒಂದು ಸರಳ ಪ್ರೇಮಕಥೆ'ಯಲ್ಲಿ ವಿನಯ್​ ರಾಜಕುಮಾರ್​ ನಾಯಕನಾಗಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಈಗ ಆ ಚಿತ್ರದಲ್ಲಿ ವಿನಯ್​ಗೆ ನಾಯಕಿಯಾಗಿ ಮಲ್ಲಿಕಾ ಸಿಂಗ್​ ನಟಿಸುತ್ತಿದ್ದಾರೆ.

'ಒಂದು ಸರಳ ಪ್ರೇಮಕಥೆ' ಎಂಬ ಹೆಸರೇ ಹೇಳುವಂತೆ ಇದೊಂದು ಪ್ರೇಮಕಥೆಯಾಗಿದ್ದು, ಒಬ್ಬ ಯುವಕ ಮತ್ತು ಇಬ್ಬರು ಯುವತಿಯರ ಸುತ್ತ ಈ ಚಿತ್ರ ಸುತ್ತತ್ತದೆ. ಈಗಾಗಲೇ, ‘ವಿಕ್ರಮ್' ಚಿತ್ರದಲ್ಲಿ ನಟಿಸಿರುವ ಸ್ವತಿಷ್ಠ ಕೃಷ್ಣನ್ ಚಿತ್ರದ ಒಬ್ಬ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗ ಇನ್ನೊಬ್ಬ ನಾಯಕಿಯಾಗಿ ಮಲ್ಲಿಕಾ ಸಿಂಗ್​ ಚಿತ್ರತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

'ಒಂದು ಸರಳ ಪ್ರೇಮಕಥೆ' ಚಿತ್ರಕ್ಕೆ ಪ್ರಸನ್ನ ಕಥೆ ಬರೆದಿದ್ದು, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆಯುವುದರ ಜತೆಗೆ ಚಿತ್ರ ನಿರ್ದೇಶಿಸುತ್ತಿದ್ದಾರೆ ಸುನಿ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಮೈಸೂರು ರಮೇಶ್​ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವೀರ್ ಸಮರ್ಥ್ ಸಂಗೀತ ಮತ್ತು ಸಭಾ ಕುಮಾರ್​ ಛಾಯಾಗ್ರಾಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net