Bigg Boss-18: ವೇದಿಕೆಯಲ್ಲೇ ಸಲ್ಮಾನ್ ಖಾನ್​ಗೆ ಚುಂಬಿಸಿದ ಮಲ್ಲಿಕಾ! ಬ್ಯಾಚುಲರ್ ಬಾಯ್​ ರೆಸ್ಪಾನ್ಸ್​ ಹೇಗಿತ್ತು ಗೊತ್ತಾ?

Bigg Boss-18
Published on

ಮುಂಬೈ: ರಿಯಾಲಿಟಿ ಶೋ ಬಿಗ್ ಬಾಸ್ 18(Bigg Boss-18) ರ ಮೊದಲ ವೀಕೆಂಡ್ ಕಾ ವಾರ್ ಸ್ಫೋಟಕವಾಗಲಿದೆ.

ಈ ಬಾರಿ ಅನೇಕ ಬಾಲಿವುಡ್ ಮತ್ತು ಟಿವಿ ನಟ-ನಟಿಯರು ಕಾರ್ಯಕ್ರಮಕ್ಕೆ ರಂಗೇರಿಸಲು ಬರುತ್ತಿದ್ದಾರೆ. ಇದರ ನಡುವೆ ಬಾಲಿವುಡ್ ಬೆಡಗಿ ಮಲ್ಲಿಕಾ ಶೆರಾವತ್ ತನ್ನ ಇತ್ತೀಚಿನ ಚಿತ್ರ ವಿಕ್ಕಿ ವಿದ್ಯಾ ಕಾ ವೋ ವಾಲಾ ದ ಪ್ರಚಾರ ಮಾಡಲು ಬಿಗ್​ಬಾಸ್​ ಮನೆಗೆ ಬಂದ್ದಿದ್ದಳು. ಮಲ್ಲಿಕಾ ಬಿಗ್ ಬಾಸ್ ಸ್ಟೇಜ್ ಮೇಲೆ ಬಂದ ಕೂಡಲೇ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಜೊತೆ ಫ್ಲರ್ಟಿಂಗ್ ಶುರು ಮಾಡಿದ್ದು, ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಒತ್ತಾಯಿಸಿದಳು.

ಆಗ ಸಲ್ಮಾನ್​ ಖಾನ್​ ನೀನು ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಉರಿಯುತ್ತದೆ ಎನ್ನುತ್ತಾರೆ. ಆಗ ಅದು ಒಳ್ಳೇಯದೇ ಎನ್ನುತ್ತಾಳೆ ಮಲ್ಲಿಕಾ. ಬಳಿಕ ಸಲ್ಮಾನ್​ ನಗಲು ಪ್ರಾರಂಭಿಸುತ್ತಾನೆ. ಅಷ್ಟೇ ಅಲ್ಲ, ನಾಚಿಕೆಪಡುತ್ತಾನೆ. ಆ ನಂತರ ಸಲ್ಮಾನ್ ಖಾನ್ ತನ್ನ ಕಣ್ಣು ಹೃದಯದಲ್ಲಿದ್ದಾರೆ ಎಂದು ಅವರು ಹೇಳುತ್ತಾರೆ. ಆಗ ಮಲ್ಲಿಕಾ ಸಲ್ಮಾನ್ ಜೊತೆ ಡ್ಯಾನ್ಸ್ ಮಾಡಿದ್ದು, ಕೆನ್ನೆಗೆ ಮುತ್ತಿಟ್ಟಿದ್ದಾಳೆ. ಇದನ್ನು ನೋಡಿದ ಭಾಯಿಜಾನ್ ನಗಲು ಆರಂಭಿಸಿದ. ಕೆಂಪು ಬಣ್ಣದ ಲೆಹೆಂಗಾ ಮತ್ತು ಚೋಲಿಯಲ್ಲಿ ಮಲ್ಲಿಕಾ ತುಂಬಾ ಸುಂದರವಾಗಿ ಕಾಣುತ್ತಿದ್ದು, ಈ ಸಂಚಿಕೆ ಇಂದು ಅಂದರೆ ಭಾನುವಾರ ಪ್ರಸಾರವಾಗಲಿದೆ.

ಅಕ್ಟೋಬರ್​ 6ರಿಂದ ಆರಂಭವಾದ ಬಿಗ್ ಬಾಸ್ 18ನೇ ಸೀಸನ್ ಒಂದೇ ವಾರದೊಳಗೆ ಭಾರಿ ಸುದ್ದಿ ಮಾಡುತ್ತಿದೆ. ಇಲ್ಲಿಯವರೆಗೆ, ಶೋನಲ್ಲಿ ಅನೇಕ ಸ್ಪರ್ಧಿಗಳ ನಡುವೆ ಸಾಕಷ್ಟು ಜಗಳಗಳು ನಡೆದಿವೆ. ಸಲ್ಮಾನ್ ಖಾನ್ ಮೊದಲ ವೀಕೆಂಡ್ ಕಾ ವಾರ್‌ನಲ್ಲಿ ಅನೇಕ ಸ್ಪರ್ಧಿಗಳಿಗೆ ಕ್ಲಾಸ್​ ನೀಡುವುದನ್ನು ಕಾಣಬಹುದು. ಆದಾಗ್ಯೂ, ಬಿಸಿ ವಾತಾವರಣದ ನಡುವೆ, ಕೆಲವು ಆಸಕ್ತಿದಾಯಕ ತಿರುವುಗಳು ಸಹ ಸಂಭವಿಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net