

ಮುಂಬೈ: ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ ಮುಂದಿನ ವರ್ಷದ ಐಪಿಎಲ್ ಟೂರ್ನಿಗೆ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಕಳೆದ 9 ಆವೃತ್ತಿಗಳಿಂದ ಈ ಹುದ್ದೆಯಲ್ಲಿದ್ದ ನ್ಯೂಜಿಲೆಂಡ್ನ ಶೇನ್ ಬಾಂಡ್ ಅವರ ಉತ್ತರಾಧಿಕಾರಿಯಾಗಿ ಮಾಲಿಂಗ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ.
ಈ ಮುನ್ನ ಮುಂಬೈ ಇಂಡಿಯನ್ಸ್ ತಂಡದ ಪರ ಪ್ರಮುಖ ವೇಗಿಯಾಗಿ ಆಡಿದ್ದ ಮಾಲಿಂಗ, ತಂಡದ 5 ಐಪಿಎಲ್ ಪ್ರಶಸ್ತಿ ಗೆಲುವುಗಳ ಪೈಕಿ 4ರಲ್ಲಿ (2013, 2015, 2017, 2019) ತಂಡದಲ್ಲಿದ್ದರು. ಮುಂಬೈ ಪರ 139 ಪಂದ್ಯ ಆಡಿದ್ದ ಮಾಲಿಂಗ 195 ವಿಕೆಟ್ ಕಬಳಿಸಿದ್ದರು.
ಈ ಮುನ್ನ 2018ರ ಆವೃತ್ತಿಯಲ್ಲಿ ಮುಂಬೈ ತಂಡದ ಮೆಂಟರ್ ಆಗಿಯೂ ಕಾರ್ಯನಿರ್ವಹಿಸಿದ್ದರು. 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಮಾಲಿಂಗ, ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿದ್ದರು.