ಜಿಲ್ಲಾಡಳಿತದ ವಿರೋಧದ ನಡುವೆಯೂ ಮಹಿಷ ದಸರಾ ಆಚರಣೆ

Mahishasura
Published on

ಮೈಸೂರು: ರಾಜ್ಯ ಸರ್ಕಾರ ಚಾಮುಂಡಿ ಬೆಟ್ಟದ ಮಹಿಷ ಮೂರ್ತಿಗೆ ಬಟ್ಟೆ ಮುಚ್ಚುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತದ ವಿರೋಧದ ನಡುವೆಯೂ ಮಹಿಷ ದಸರಾ ಆಚರಣಾ ಸಮಿತಿಯು ನಗರದ ಅಶೋಕಪುಂ ಉದ್ಯಾನದ ಮುಂಭಾಗ ಭಾನುವಾರ ಆಯೋಜಿಸಿದ್ದ ಮಹಿಷ ದಸರಾ ಉದ್ಘಾಟಿಸಿ ಮಾತನಾಡಿದರು.

ಮಹಿಷ ಈ ನೆಲದ ಒಡೆಯ. ಆತನಿಗೆ ಗೌರವ ಕೊಡದ ಮೈಸೂರು ದಸರಾ ಅಪೂರ್ಣ ಈ ನೆಲದ ಧರ್ಮವನ್ನು ಕಾಪಾಡುವುದು ನಮ್ಮ ಕರ್ತವ್ಯ. ಆದರೆ ಬಿಜೆಪಿ ಸರ್ಕಾರ ಬಹುತ್ವ, ಸಂವಿಧಾನ ಮತ್ತು ಪ್ರಜಾಭುತ್ವದ ಕಗ್ಗೊಲೆ ನಡೆಸುತ್ತಿದೆ ಎಂದು ಗುಡುಗಿದರು.

ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು, ಉರಿಲಿಂಗಿ ಪೆದ್ದಿಮಠದ ತಿ.ನರಸೀಪುರ ಶಾಖೆಯ ಸಿದ್ಧರಾಮ ಸ್ವಾಮಿ, ಮಾಜಿ ಮೇಯರ್ ಪುರುಷೋತ್ತಮ್, ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ಲೇಖಕ ಸಿದ್ದಸ್ವಾಮಿ, ಬಬಿತಾ, ನಗರಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಸೋಮಯ್ಯ ಮೆಲೆಯೂರು, ಜವರಪ್ಪ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net