ಐಸಿಎಐ ಭವನದಲ್ಲಿ ಮಹಿಳಾ ದಿನಾಚರಣೆ

IMG-20250310-WA0032
Published on

ಮಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಂಗಳೂರಿನ ಐಸಿಎಐ ಭವನದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಡಾ. ಭಾರತಿ ಶೆವ್‌ಗೂರ್ ಅವರು ಸ್ಟೀರಿಯೊಟೈಪ್‌ಗಳನ್ನು ಮೀರಿ - ವೃತ್ತಿಪರರಾಗಿ ಮಹಿಳೆ ಎಂಬ ವಿಷಯದ ಕುರಿತು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಜಾಯ್ಲೀನ್ ಡಿ’ಅಲ್ಮೇಡಾ ಅವರು ದೈಹಿಕ ಮತ್ತು ಮಾನಸಿಕ ಆರೋಗ್ಯ ಎಂಬ ವಿಷಯದ ಕುರಿತು ಮಾತನಾಡಿದರು. ಜಲಲಕ್ಷ್ಮಿ ಹೆಗ್ಡೆ ಅವರು ಪೌಷ್ಠಿಕಾಂಶ, ಚಿಂತನೆಗೆ ಆಹಾರ ಎಂಬ ವಿಷಯದ ಕುರಿತು ಮಾತನಾಡಿದರು.

ಸದಸ್ಯ ಮತ್ತು ಸಿಕಾಸಾ ಕೋ ಆಪ್ಟ್ ಸಿಎ ಗೌರವ್ ಹೆಗ್ಡೆ, ಸಿಎ ಸದಸ್ಯರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಮಹಿಳೆಯರು ಉಪಸ್ಥಿತರಿದ್ದರು. ಅಧ್ಯಕ್ಷ ಸಿಎ ಪ್ರಶಾಂತ್ ಪೈ ಕೆ ಸ್ವಾಗತಿಸಿದರು, ಕಾರ್ಯದರ್ಶಿ ಮತ್ತು ಕಾರ್ಯಕ್ರಮ ಸಂಯೋಜಕಿ ಸಿಎ ಮಮತಾ ರಾವ್ ವಂದಿಸಿದರು. ಉಪಾಧ್ಯಕ್ಷ ಸಿಎ ಡೇನಿಯಲ್ ಮಾರ್ಷ್ ಪೆರಿಯೆರಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net