More

    ಸಾಹಿತ್ಯ ಸಮ್ಮೇಳನದ ಗೋಷ್ಠಿ ಮಧ್ಯೆ ಗುರು ಗೋವಿಂದ ಭಟ್ಟರ ಮರಿ ಮೊಮ್ಮಗ ಪ್ರವೇಶ!

    ಹಾವೇರಿ: ಈ ಸಲದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತಯಾರಿ ಆರಂಭ ಆದಾಗಿನಿಂದಲೂ ವಾದ-ವಿವಾದಕ್ಕೆ ಒಳಗಾಗಿದ್ದು, ಸಮ್ಮೇಳನದ ಮೊದಲ ದಿನವೂ ಅದರ ಛಾಯೆ ಮುಂದುವರಿದಿದೆ. ಟೀಕಾಕಾರರಿಗೆ ಮತ್ತೊಮ್ಮೆ ಟಾಂಗ್ ಕೊಡುವ ಸಲುವಾಗಿ ಸಮ್ಮೇಳನದ ಗೋಷ್ಠಿಯಲ್ಲಿ ಗುರು ಗೋವಿಂದ ಭಟ್ಟರ ಮರಿ ಮೊಮ್ಮಗ ಮಧ್ಯ ಪ್ರವೇಶ ಮಾಡಿದ್ದಾರೆ.

    ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಅವರು ಈ ಬಾರಿಯ ಸಾಹಿತ್ಯ ಸಮ್ಮೇಳನದ ಕುರಿತಂತೆ ಕೇಳಿಬಂದ ಟೀಕೆಗಳಿಗೆ ಈ ಹಿಂದೆ ಉತ್ತರಿಸುವಾಗ ನಾನು ಗುರು ಗೋವಿಂದ ಭಟ್ಟರ ಮರಿ ಮೊಮ್ಮಗ ಎಂದು ಹೇಳಿದ್ದರು. ಅವರು ಹಾಗೆ ಹೇಳಿದ್ದು ಕೂಡ ಮತ್ತೊಂದು ವಿವಾದಕ್ಕೆ ಒಳಗಾಗಿತ್ತು.

    ಸಾಹಿತ್ಯ ಸಮ್ಮೇಳನದ ಮೊದಲ ದಿನವಾದ ಇಂದು ಅವರು ಗೋಷ್ಠಿ ಮಧ್ಯೆಯೇ ಪ್ರವೇಶ ಮಾಡಿ, ನಾನು ಗುರು ಗೋವಿಂದ ಭಟ್ಟರ ಮರಿ ಮೊಮ್ಮಗ ಎಂದು ಮತ್ತೆ ಹೇಳಿದ್ದಾರೆ. ಸಾಮರಸ್ಯದ ಭಾಗ-ಕನ್ನಡ ಜೀವ ಗೋಷ್ಠಿ ಮಧ್ಯೆ ಪ್ರವೇಶ ಮಾಡಿ ಅವರು ಈ ಹೇಳಿಕೆ ನೀಡಿದರು.

    ಇದನ್ನೂ ಓದಿ: ಹಿಂದೂ ಹುಡುಗಿ ಜತೆ ತಿರುಗುತ್ತಿದ್ದ ಮುಸ್ಲಿಂ ಹುಡುಗನಿಗೆ ಥಳಿತ; ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್​ಗಿರಿ

    ಶಿಶುನಾಳ ಷರೀಫರ ಬಗ್ಗೆ ಎ.ಸಿ. ವಾಲಿ ಅವರು ಉಪನ್ಯಾಸ ನೀಡಿದ ಬಳಿಕ ಮಧ್ಯ ಪ್ರವೇಶಿಸಿ ಮಾತನಾಡಿದರು. ಮಾತ್ರವಲ್ಲ, ಈ ಮೂಲಕ ಬಹಿರಂಗ ವೇದಿಕೆಯಲ್ಲಿಯೂ ವಿರೋಧಿಗಳಿಗೆ ತಿರುಗೇಟು ನೀಡಿದರು. ಜೋಶಿಯವರು ಗೋವಿಂದ ಭಟ್ಟ ಮರಿ ಮೊಮ್ಮಗ ಅಲ್ಲ ಎಂದು ಕೆಲವು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಗೋಷ್ಠಿ ಮಧ್ಯೆ ಪ್ರವೇಶ ಮಾಡಿದ ಜೋಶಿ ನಾನು ಗುರು ಗೋವಿಂದ ಭಟ್ಟರ ಮರಿ ಮೊಮ್ಮಗ ಎಂದು ಮತ್ತೊಮ್ಮೆ ಹೇಳಿದರು.

    ಗೋಷ್ಠಿಯಲ್ಲಿ ವಾಲಿಯವರು ಷರೀಫರ ಬಗ್ಗೆ ಮಾತನಾಡುತ್ತಿದ್ದರು, ಆಗ ನಾನು ಜನರ ಮಧ್ಯೆ ಇದ್ದೆ. ಜನರು ನೀವು ಗೋವಿಂದ ಭಟ್ಟರ ಮರಿ ಮೊಮ್ಮಗ, ನೀವು ಸ್ವಲ್ಪ ಮಾತನಾಡಿ ಎಂದು ಹೇಳಿದರು. ಹೀಗಾಗಿ ನಾನು ಮಧ್ಯೆ ಮಾತನಾಡಲು ಬಂದೆ, ‘ನಾನು ಗೋವಿಂದ ಭಟ್ಟರ ಮರಿ ಮೊಮ್ಮಗ, ಹೀಗಾಗಿ ಮಾತನಾಡುವೆ’ ಎಂದರು.

    ಮದುವೆ ಆಗಿಲ್ಲ ಅಂದ್ರೆ ಮನೆ ಖಾಲಿ ಮಾಡಿ: ಬಾಡಿಗೆದಾರರಿಗೆ ವಿಚಿತ್ರ ಎಚ್ಚರಿಕೆ

    ಮನೆ ಬಾಗಿಲಲ್ಲಿ ಕಸ, ಬೆಡ್​ರೂಮ್​ನಲ್ಲಿದ್ದ ಚಿನ್ನಾಭರಣ ನಾಪತ್ತೆ; ಎಚ್ಚರಿಕೆ ಸಾರ್ವಜನಿಕರೇ.. ಈ ಬಗ್ಗೆ ಇರಲಿ ಗಮನ

    ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದ ‘ಶವ’!; ಮಹಿಳೆ ಮೃತಪಟ್ಟಳು ಎಂದು ವೈದ್ಯರು ದೃಢೀಕರಿಸಿದ್ದರೂ ಸಂಭವಿಸಿದ ಅಚ್ಚರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts