ಬದಿಯಡ್ಕ ಜನಜಾಗೃತಿ ವೇದಿಕೆ

jayanthi
Published on

ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಾಸರಗೋಡು ಹಾಗೂ ಜನಜಾಗೃತಿ ವೇದಿಕೆ ಬದಿಯಡ್ಕ ವಲಯ ಆಶ್ರಯದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಬದಿಯಡ್ಕ ಜನಮೈತ್ರಿ ಪೊಲೀಸ್ ಅಧಿಕಾರಿ ಶೀನು ಉದ್ಘಾಟಿಸಿದರು. ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮುಕೇಶ್ ಶುಭಹಾರೈಸಿದರು. ರೋಟರಿ ಕ್ಲಬ್ ಬದಿಯಡ್ಕ ಅಧ್ಯಕ್ಷ ಕೇಶವ ಪಾಟಾಳಿ, ಸಾಮಾಜಿಕ ಮುಖಂಡ ನಾರಾಯಣ ನಂಬಿಯಾರ್ ಏತಡ್ಕ, ಅವಿನಾಶ್ ರೈ ಬದಿಯಡ್ಕ, ಪ್ರತೀಕ ಮವ್ವಾರ್, ಜನಜಾಗೃತಿ ವೇದಿಕೆ ಸದಸ್ಯ ಜಯರಾಮ ಪಾಟಾಳಿ ಪಡುಮಲೆ, ಸುಧಾಕರ ಬದಿಯಡ್ಕ, ವಲಯ ಅಧ್ಯಕ್ಷ ತಾರನಾಥ ರೈ, ರೋಹಿತಾಕ್ಷ, ಶೌರ್ಯ ವಿಪತ್ತು ಘಟಕದ ಸದಸ್ಯರು, ಸೌಪರ್ಣಿಕ ನವಜೀವನ ಸಮಿತಿಯ ಗಣೇಶ್ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಕವಿತಾ ಗಿರೀಶ್ ರೈ ಸ್ವಾಗತಿಸಿದರು. ಕಮಲಾಕ್ಷಿ ವಂದಿಸಿದರು. ವಲಯ ಮೇಲ್ವಿಚಾರಕ ಗೋಪಾಲಕೃಷ್ಣ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net