ಮಹಾಸತಿ ಸಂಘ ಸದಸ್ಯರಿಗೆ ಶೇ.10 ಡಿವಿಡೆಂಡ್

mahasathi
ಗಂಗೊಳ್ಳಿಯ ಮಹಾಸತಿ ಪ್ರಾಥಮಿಕ ಮೀನುಗಾರರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ 2023-24ನೇ ಸಾಲಿನ ಮಹಾಸಭೆ ವೀರೇಶ ಮಾಂಗಲ್ಯ ಮಂದಿರದಲ್ಲಿ ನಡೆಯಿತು
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಇಲ್ಲಿನ ಮಹಾಸತಿ ಪ್ರಾಥಮಿಕ ಮೀನುಗಾರರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ 2023-24ನೇ ಸಾಲಿನ ಮಹಾಸಭೆ ಗಂಗೊಳ್ಳಿಯ ವೀರೇಶ ಮಾಂಗಲ್ಯ ಮಂದಿರದಲ್ಲಿ ಗುರುವಾರ ನಡೆಯಿತು. ಸಂಘದ ಅಧ್ಯಕ್ಷೆ ನೀಲಾವತಿ ಎಸ್. ಖಾರ್ವಿ ಅಧ್ಯಕ್ಷತೆ ವಹಿಸಿ, ವರದಿ ವರ್ಷದಲ್ಲಿ 4,519 ಸದಸ್ಯರಿದ್ದು, 21.80 ಲಕ್ಷ ರೂ. ಪಾಲು ಬಂಡವಾಳ ಹೊಂದಿದೆ. ವರ್ಷಾಂತ್ಯಕ್ಕೆ 17.35 ಕೋಟಿ ರೂ.ಗೂ ಹೆಚ್ಚು ಠೇವಣಿ ಹೊಂದಿದ್ದು, ಹೊರಬಾಕಿ ಸಾಲ 11.08 ಕೋಟಿ ರೂ. ಇದೆ. 9.21 ಕೋಟಿ ರೂ.ಗಳನ್ನು ವಿವಿಧ ಸಂಘ, ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದ್ದು, ವರ್ಷಾಂತ್ಯಕ್ಕೆ ಸಂಘ 15.16 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಪಾಲು ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷೆ ಶೈಲಾ ಎಂ.ಖಾರ್ವಿ, ನಿರ್ದೇಶಕಿಯರಾದ ಸುಶೀಲಾ ಎ. ಖಾರ್ವಿ, ಶಾರದಾ ಆರ್. ಹೆಗ್ಡೆ, ಸುರೇಖಾ ಎನ್. ಕಾನೋಜಿ, ಜಯಂತಿ ಆರ್. ಪಠೇಲ್, ರೇಖಾ ಜಿ. ಖಾರ್ವಿ ಉಪಸ್ಥಿತರಿದ್ದರು. ಸುನೀತಾ ಪ್ರಶಾಂತ ಖಾರ್ವಿ ಪ್ರಾರ್ಥಿಸಿದರು. ಅನಿತಾ ವಿ. ಖಾರ್ವಿ ಸ್ವಾಗತಿಸಿದರು. ನಿರ್ದೇಶಕಿ ಶಾರದಾ ಎಸ್. ಖಾರ್ವಿ ವಂದಿಸಿದರು. ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಗಣಪತಿ ಖಾರ್ವಿ 2024-2025ನೇ ಸಾಲಿನ ಆಯ-ವ್ಯಯ ಬಜೆಟ್ ಹಾಗೂ 2023-24ನೇ ಸಾಲಿನ ಲಾಭಾಂಶ ವಿಂಗಡನೆ ಮಂಡಿಸಿ ನಿರೂಪಿಸಿದರು.

ವಿದ್ಯಾರ್ಥಿವೇತನ ವಿತರಣೆ

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ತೇರ್ಗಡೆಯಾದ ಸಹಕಾರಿ ಸಂಘದ ಸದಸ್ಯರ ಮಕ್ಕಳಿಗೆ ಸಭೆಯಲ್ಲಿ ವಿದ್ಯಾರ್ಥಿವೇತನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net