More

    ಬೆಳಗ್ಗೆ ವಾಕಿಂಗ್​ ಮಾಡುವಾಗ ಹುಲಿ ರಸ್ತೆ ದಾಟುವುದನ್ನು ನೋಡಿ ಹೆದರಿ ಹೃದಯಾಘಾತದಿಂದ ವ್ಯಕ್ತಿ ಸಾವು

    ಪುಣೆ: ಬೆಳಗ್ಗೆ ವಾಕಿಂಗ್​ ಮಾಡುವಾಗ ಹುಲಿಯೊಂದು ರಸ್ತೆ ಕ್ರಾಸ್​ ಮಾಡುವುದನ್ನು ನೋಡಿ, ಭಯಗೊಂಡು ಹೃದಯಾಘಾತದಿಂದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಈ ಘಟನೆ ಗುರುವಾರ ಬೆಳಗ್ಗೆ ಮಹಾರಾಷ್ಟ್ರದ ಚಂದ್ರಪುರ್​ ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಪ್ರವೀಣ್​ ಮರಾಠೆ ಎಂದು ಗುರುತಿಸಲಾಗಿದೆ. ಅರಣ್ಯ ಪ್ರದೇಶದ ಅಂಚಿನಲ್ಲಿರುವ ರಸ್ತೆಯ ಒಂದು ಬದಿಯಲ್ಲಿ ಕಾರು ನಿಲ್ಲಿಸಿ, ಪ್ರವೀಣ್​ ವಾಕಿಂಗ್​ ಮಾಡಲು ಹೊರಟರು. ಈ ವೇಳೆ ಹುಲಿಯೊಂದು ರಸ್ತೆ ದಾಟುವುದನ್ನು ನೋಡಿ ಹೆದರಿದರು. ಇದರಿಂದ ಹೃದಯಾಘಾತವಾಗಿ ಸ್ಥಳದಲ್ಲೇ ಪ್ರವೀಣ್​ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಇದೇ ಸಂದರ್ಭದಲ್ಲಿ ವಾಕಿಂಗ್ ಮಾಡುತ್ತಿದ್ದ ಇತರರು ರಸ್ತೆಯ ಮೇಲೆ ಬಿದ್ದು, ಉಸಿರಾಡಲು ತುಂಬಾ ಕಷ್ಟಪಡುತ್ತಿದ್ದ ಪ್ರವೀಣ್​ರನ್ನು ನೋಡಿ, ತಕ್ಷಣ ಆಂಬ್ಯುಲೆನ್ಸ್ ಮತ್ತು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಆದರೆ ಅವರು ಬರುವಷ್ಟರಲ್ಲಿ ಪ್ರವೀಣ್​ ಪ್ರಾಣ ಪಕ್ಷಿ ಹಾಕಿ ಹೋಗಿತ್ತು.

    ಇನ್ನು ಮಾನವ-ಪ್ರಾಣಿ ಸಂಘರ್ಷದ ಘಟನೆ ಇದೇ ಮೊದಲೇನಲ್ಲ. ಕೆಲ ದಿನಗಳ ಹಿಂದೆ 65 ವರ್ಷದ ವ್ಯಕ್ತಿಯೊಬ್ಬರು ಮಲ ವಿಸರ್ಜನೆಗೆ ತೆರಳಿದ್ದ ವೇಳೆ ಹುಲಿ ಕಾಣಿಸಿಕೊಂಡಿತ್ತು. ಹುಲಿಯನ್ನು ನಾಯಿ ಎಂದು ಭಾವಿಸಿದ ಅವರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ತಿಳಿದ ತಕ್ಷಣ ಓಡಿಹೋದರು. ಅದೃಷ್ಟವಶಾತ್ ಅವರು ಬದುಕುಳಿದರು. (ಏಜೆನ್ಸೀಸ್​)

    ಟ್ವಿಟರ್​ ದಿವಾಳಿ ಸಾಧ್ಯತೆ ತಳ್ಳಿಹಾಕುವಂತಿಲ್ಲ: ಉದ್ಯೋಗಿಗಳನ್ನು ಚಿಂತೆಗೆ ದೂಡಿದ ಎಲಾನ್​ ಮಸ್ಕ್​ ವಾರ್ನಿಂಗ್​

    ಮಡಿಕೇರಿಯೊಲ್ಲೊಬ್ಬ ವಿಕೃತಕಾಮಿ: ಮೃತದೇಹಗಳ ಬೆತ್ತಲೆ ಫೋಟೋ ತೆಗೆದು ಸಂಭ್ರಮಿಸುವುದೇ ಈತನ ಚಾಳಿ

    Gujrat Election| ಪತ್ನಿಗೆ ಬಿಜೆಪಿ ಟಿಕೆಟ್​ ಒಲಿದ ಬೆನ್ನಲ್ಲೇ ಹೆಮ್ಮೆಯ ಮಾತುಗಳಾಡಿದ ರವೀಂದ್ರ ಜಡೇಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts