More

  ಭಾರತ ಪ್ರವಾಸ ಬೆನ್ನಲ್ಲೇ ಸಿನಿಮಾಗೆ ಕಮ್​ಬ್ಯಾಕ್​ ಮಾಡಿದ ಪ್ರಿಯಾಂಕಾ ಚೋಪ್ರಾ

  ಮುಂಬೈ: ಕಳೆದ ಕೆಲ ದಿನಗಳ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದ ನಟಿ ಪ್ರಿಯಾಂಕಾ ಚೋಪ್ರಾ ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಆದರೆ, ಅವರು ಕಮ್​ಬ್ಯಾಕ್​ ಮಾಡುತ್ತಿರುವುದು ನಟನೆ ಮೂಲಕ ಅಲ್ಲಾ ಬದಲಾಗಿ ವಾಯ್ಸ್​​ಓವರ್​ ಮೂಲಕ ಎನ್ನುವುದು ವಿಶೇಷ.

  ಭಾರತ ಪ್ರವಾಸ್​ ಮುಗಿಸಿ ಅಮೆರಿಕಾಕ್ಕೆ ವಾಪಸ್​ ಆಗುತ್ತಿದ್ದಂತೆ ಹೊಸ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.  ಡಿಸ್ನಿ ಪ್ಲಸ್ ಹಾಟ್​​ ಸ್ಟಾರ್​ನಲ್ಲಿ ಪ್ರಸಾರವಾಗಲಿರುವ ಟೈಗರ್​ ಡಾಕ್ಯೂಮೆಂಟರಿಗೆ ಅವರು ಧ್ವನಿಯಾಗಲಿದ್ದಾರೆ.

  ಇದನ್ನೂ ಓದಿ: ಹಾಗೆ ಹೇಳಿ ತಪ್ಪು ಮಾಡಿದೆ, ಈಗ ನನಗೆ ನಾನೇ ಶಿಕ್ಷೆ ಕೊಟ್ಟುಕೊಂಡುದಿದ್ದೇನೆ: ವಿಜಯ್​ ದೇವರಕೊಂಡ

  ಟೈಗರ್​ ಡಾಕ್ಯೂಮೆಂಟರಿ ಟ್ರೇಲರ್​ನ ತುಣುಕನ್ನು  ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  ಈ ಡಾಕ್ಯುಮೆಂಟರಿಯಲ್ಲಿ ಬರುವ ವಿವರಣೆಗಳು ಪ್ರಿಯಾಂಕಾ ಚೋಪ್ರಾ ಧ್ವನಿಯಲ್ಲಿ ಇರಲಿದೆ. ‘ಅತ್ಯದ್ಭುತ ಸ್ಟೋರಿ ಹಾಗೂ ಕಾಡಿನ ಅನ್ವೇಷಣೆ ಮಾಡುವ ಈ ಡಾಕ್ಯೂಮೆಂಟರಿಗೆ ನಾನು ಧ್ವನಿ ನೀಡುತ್ತಿರುವುದು ಖುಷಿ ಇದೆ. ಇದಕ್ಕಾಗಿ ಕಾಯುತ್ತಿದ್ದೇನೆ. ನಮ್ಮ ಜೊತೆ ಕಾಡನ್ನು ಎಂಜಾಯ್ ಮಾಡಿ ಎಂದು ಬರೆದುಕೊಂಡಿದ್ದಾರೆ.

  ಹುಲಿಗಳು ಸಖತ್ ವೈಲ್ಡ್. ಅವರಿಗೂ ಮನುಷ್ಯರಂತೆ ಭಾವನೆಗಳಿದೆ, ಸಿಟ್ಟಿದೆ, ಪ್ರೀತಿ ಇದೆ, ಹಸಿವು ಇದೆ. ಹುಲಿಗಳ ಜೀವನವನ್ನು ಈ ಸಿನಿಮಾದಲ್ಲಿ ತೆರೆದಿಡಲಾಗುತ್ತಿದೆ. ತಾಯಿ ಹಾಗೂ ಮಗುವಿನ ಬಾಂಧವ್ಯವನ್ನು ಈ ಡಾಕ್ಯುಮೆಂಟರಿಯಲ್ಲಿ ಹೇಳಲಾಗುತ್ತಿದೆ. ಈ ಸಿನಿಮಾನ ಬರೋಬ್ಬರಿ 8 ವರ್ಷಗಳ ಕಾಲ ಶೂಟ್ ಮಾಡಲಾಗಿದೆ. ಏಪ್ರಿಲ್ 22ರಂದು ಈ ಡಾಕ್ಯುಮೆಂಟರಿ ರಿಲೀಸ್ ಆಗಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts