More

    ಟ್ವಿಟರ್​ ದಿವಾಳಿ ಸಾಧ್ಯತೆ ತಳ್ಳಿಹಾಕುವಂತಿಲ್ಲ: ಉದ್ಯೋಗಿಗಳನ್ನು ಚಿಂತೆಗೆ ದೂಡಿದ ಎಲಾನ್​ ಮಸ್ಕ್​ ವಾರ್ನಿಂಗ್​

    ನವದೆಹಲಿ: ಸಾಮಾಜಿಕ ಜಾಲತಾಣ ದೈತ್ಯ ಕಂಪನಿಗಳಲ್ಲಿ ಒಂದಾದ ಟ್ವಿಟರ್ ಅನ್ನು ಖರೀದಿರುವ ಬೆನ್ನಲ್ಲೇ ಅದರ ದಿವಾಳಿತನದ ಬಗ್ಗೆ ಮಾಲೀಕ ಎಲಾನ್​ ಮಸ್ಕ್​ ಎಚ್ಚರಿಕೆ ನೀಡಿದ್ದು, ಇದೀಗ ಉದ್ಯೋಗಿಗಳನ್ನು ಚಿಂತೆಗೆ ದೂಡಿದೆ.

    ಅನೇಕ ಹಿರಿಯ ಅಧಿಕಾರಿಗಳು ಟ್ವಿಟರ್​ನಿಂದ ಹೊರ ನಡೆಯುತ್ತಿರುವುದರ ನಡುವೆಯೇ ಎಲಾನ್​ ಮಸ್ಕ್​ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ತನ್ನ ಉದ್ಯೋಗಿಗಳನ್ನು ಉದ್ದೇಶಿಸಿ ಹೇಳಿಕೆ ನೀಡಿರುವ ಮಸ್ಕ್​, ಟ್ವಿಟರ್​ ದಿವಾಳಿ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿದ್ದಾರೆ. ಇದನ್ನು ಬ್ಲೂಮ್​ಬರ್ಗ್​ ವರದಿ ಮಾಡಿದೆ. 44 ಬಿಲಿಯನ್​ ಡಾಲರ್​ಗೆ ಟ್ವಿಟರ್​ ಖರೀದಿ ಮಾಡಿರುವ ಎಲಾನ್​ ಮಸ್ಕ್​, ಕೆಲವೇ ದಿನಗಳಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಇದೀಗ ದಿವಾಳಿ ಮಾತುಗಳನ್ನಾಡಿರುವುದು ಉದ್ಯೋಗಿಗಳನ್ನು ಮತ್ತಷ್ಟು ಚಿಂತೆಗೆ ದೂಡಿದೆ.

    ಮಸ್ಕ್ ಅವರೊಂದಿಗೆ ಟ್ವಿಟರ್ ಸ್ಪೇಸ್‌ಗಳ ಚಾಟ್ ಅನ್ನು ಮಾಡರೇಟ್ ಮಾಡುವ ಇಬ್ಬರು ಕಾರ್ಯನಿರ್ವಾಹಕ ಅಧಿಕಾರಿಗಳಾದ ಯೊಯೆಲ್ ರಾತ್ ಮತ್ತು ರಾಬಿನ್ ವೀಲರ್ ಬುಧವಾರ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಟ್ವಿಟರ್‌ನ ಮುಖ್ಯ ಭದ್ರತಾ ಅಧಿಕಾರಿ ಲಿಯಾ ಕಿಸ್ನರ್ ಅವರು ಸಹ ಗುರುವಾರ ರಾಜೀನಾಮೆ ನೀಡಿದ್ದಾರೆ.

    ಮುಖ್ಯ ಗೌಪ್ಯತಾ ಅಧಿಕಾರಿ ಡೇಮಿಯನ್ ಕೀರನ್ ಮತ್ತು ಮುಖ್ಯ ಅನುಸರಣೆ ಅಧಿಕಾರಿ ಮೇರಿಯಾನ್ನೆ ಫೋಗಾರ್ಟಿ ಕೂಡ ರಾಜೀನಾಮೆ ನೀಡಿದ್ದಾರೆ. ಟ್ವಿಟರ್​ನ ಉನ್ನತ ಅಧಿಕಾರಿಗಳ ಸಾಲು ಸಾಲು ರಾಜೀನಾಮೆಯಿಂದ ಕಂಪನಿ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಎಲಾನ್​ ಮಸ್ಕ್​ ಟ್ವಿಟರ್​ ದಿವಾಳಿ ಆಗುವ ಮಾತುಗಳನ್ನಾಡಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ವಂದೇ ಭಾರತ್​ ಎಕ್ಸ್​ಪ್ರೆಸ್​, ಭಾರತ್ ಗೌರವ್ ಕಾಶಿ ದರ್ಶನ್ ರೈಲುಗಳಿಗೆ ಚಾಲನೆ ನೀಡಿದ ಮೋದಿ

    Gujrat Election| ಪತ್ನಿಗೆ ಬಿಜೆಪಿ ಟಿಕೆಟ್​ ಒಲಿದ ಬೆನ್ನಲ್ಲೇ ಹೆಮ್ಮೆಯ ಮಾತುಗಳಾಡಿದ ರವೀಂದ್ರ ಜಡೇಜಾ

    ಕನಕರ ಸಮಾಜಮುಖಿ ಚಿಂತನೆ ಪ್ರಸಾರಕ್ಕೆ ಒತ್ತು; ಶ್ರೀ ನಿರಂಜನಾನಂದಪುರಿ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts