More

    Gujrat Election| ಪತ್ನಿಗೆ ಬಿಜೆಪಿ ಟಿಕೆಟ್​ ಒಲಿದ ಬೆನ್ನಲ್ಲೇ ಹೆಮ್ಮೆಯ ಮಾತುಗಳಾಡಿದ ರವೀಂದ್ರ ಜಡೇಜಾ

    ಅಹಮದಾಬಾದ್​: ಬಿಜೆಪಿ (BJP)ಯಿಂದ ಗುಜರಾತ್​ ವಿಧಾನಸಭಾ ಚುನಾವಣೆ (Gujarat polls) ಯಲ್ಲಿ ಸ್ಪರ್ಧಿಸಲು ಟಿಕೆಟ್​ ಪಡೆದ ಪತ್ನಿ ರಿವಾಬಾ (Rivaba Jadeja)ಗೆ ಕ್ರಿಕೆಟಿಗ ರವೀಂದ್ರ ಜಡೇಜಾ (Ravindra Jadeja) ಅಭಿನಂದನೆಗಳನ್ನು ತಿಳಿಸಿದ್ದಾರೆ.

    ಟ್ವೀಟ್​ ಮಾಡಿರುವ ಜಡೇಜಾ, ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್​ ಪಡೆದ ನನ್ನ ಪತ್ನಿಗೆ ಅಭಿನಂದನೆಗಳು. ಇದಕ್ಕಾಗಿ ನೀನು ಮಾಡಿದ ಎಲ್ಲ ಪ್ರಯತ್ನ ಹಾಗೂ ಶ್ರಮದ ಬಗ್ಗೆ ನನಗೆ ಹೆಮ್ಮೆ ಇದೆ. ನಿನಗೆ ನನ್ನ ಶುಭಾಶಯಗಳು. ಸಮಾಜದ ಅಭಿವೃದ್ಧಿಗಾಗಿ ನಿನ್ನ ಕೆಲಸ ಮುಂದುವರಿಯಲಿ. ನನ್ನ ಪತ್ನಿಯ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಉತ್ತಮ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಪ್ರಧಾನಿ ಮೋದಿ (PM Modi) ಮತ್ತು ಗೃಹ ಸಚಿವ ಅಮಿತ್​ ಶಾ (Amit Shah) ಅವರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.

    ಬಿಜೆಪಿ ಟಿಕೆಟ್​ ಸಿಕ್ಕಿದ ಕೂಡಲೇ ಮಾಧ್ಯಮದವರೊಂದಿಗೆ ಮಾತನಾಡಿದ ರಿವಾಬಾ, ಪ್ರಗತಿ ಮತ್ತು ಅಭಿವೃದ್ಧಿಯ ವಿಷಯವು ಇಲ್ಲಿ ಮುಖ್ಯವಾಗಿದೆ. ಪಕ್ಷವು ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್​ ನೀಡಿರುವುದಕ್ಕ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಗುಜರಾತ್ ಸಿಎಂ ಅವರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದಿದ್ದಾರೆ.

    ಗುಜರಾತ್​ ವಿಧಾನಸಭೆಯ ಜಾಮ್​ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ರಿವಾಬಾ (Rivaba Jadeja) ಸ್ಪರ್ಧಿಸಲಿದ್ದಾರೆ. ರಿವಾಬಾ ಜಡೇಜಾ ಅವರು 1990ರ ಸೆ. 5ರಂದು ಜನಿಸಿದರು. ಗುಜರಾತ್​ನ ರಾಜ್​ಕೋಟ್​ನಲ್ಲಿರುವ ಆತ್ಮೀಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಕಾಲೇಜಿನಲ್ಲಿ ಮೆಕಾನಿಕಲ್​ ಇಂಜಿನಿಯರ್​ ಓದಿದ್ದಾರೆ. 2016ರಲ್ಲಿ ಜಡೇಜಾರನ್ನು ವರಿಸಿದರು. 2019ರಲ್ಲಿ ಬಿಜೆಪಿ ಪಕ್ಷ ಸೇರಿಕೊಂಡು, ಸಕ್ರೀಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.

    ರವೀಂದ್ರ ಜಡೇಜಾ ಸಹೋದರಿ, ನೈನಾ ಜಡೇಜಾ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಜಡೇಜಾ ಪತ್ನಿ ಹಾಗೂ ಸೋದರಿ, ಒಂದೇ ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷದಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಸದ್ಯಕ್ಕೆ ರಿವಾಬಾಗೆ ಬಜೆಪಿಯಿಂದ ಟಿಕೆಟ್​ ಖಚಿತವಾಗಿದೆ.

    ಈ ವರ್ಷದ ಡಿಸೆಂಬರ್​ನಲ್ಲಿ ನಡೆಯಲಿರುವ ಗುಜರಾತ್​ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ನಿನ್ನೆ (ನ.10) ಅಭ್ಯರ್ಥಿಗಳ (BJP Candidates List) ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸುಮಾರು 100 ಅಭ್ಯರ್ಥಿಗಳ ಹೆಸರು ಮತ್ತು ಸ್ಪರ್ಧಿಸುವ ಕ್ಷೇತ್ರಗಳ ಬಗ್ಗೆ ಮಾಹಿತಿ ಇರುವ ಪಟ್ಟಿಯನ್ನು ಕೇಂದ್ರ ಸಚಿವ ಭೂಪೇಂದ್ರ ಯಾದವ್​ ಬಿಡುಗಡೆ ಮಾಡಿದರು.

    ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್​ (bhupendra Patel) ಘಟ್ಲೋಡಿಯಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಮಾಜಿ ಸಿಎಂ ವಿಜಯ್​ ರೂಪಾಣಿ (Vijay Rupani) ಮತ್ತು ಪಕ್ಷದ ಹಿರಿಯ ನಾಯಕ ಭೂಪೇಂದ್ರಸಿನ್ಹ್​ ಚುಡಾಸಮಾ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ.

    ಅಂದಹಾಗೆ ಡಿಸೆಂಬರ್​ 1 ಮತ್ತು 5ಕ್ಕೆ ಎರಡು ಹಂತಗಳಲ್ಲಿ ಗುಜರಾತ್​ನಲ್ಲಿ ಮತದಾನ ನಡೆಯಲಿದ್ದು, ಡಿ.8ಕ್ಕೆ ಫಲಿತಾಂಶ ಹೊರ ಬೀಳಲಿದೆ. ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶವು ಕೂಡ ಅಂದೇ ಹೊರಬೀಳಲಿದೆ. ಗುಜರಾತ್​ ವಿಧಾನಸಭೆಯು 182 ಸ್ಥಾನಗಳನ್ನು ಹೊಂದಿದ್ದು, ಬಹುಮತ ಪಡೆಯಲು 92 ಸ್ಥಾನ ಅಗತ್ಯ. ಹಿಮಾಚಲಪ್ರದೇಶ ವಿಧಾನಸಭೆಯು 68 ಕ್ಷೇತ್ರಗಳನ್ನ ಹೊಂದಿದ್ದು, ಬಹುಮತ ಪಡೆಯಲು 35 ಸ್ಥಾನ ಅಗತ್ಯ. ಸದ್ಯ ಎರಡೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. (ಏಜೆನ್ಸೀಸ್​)

    ಗುಜರಾತ್ 38 ಶಾಸಕರಿಗಿಲ್ಲ ಟಿಕೆಟ್; 160 ಕ್ಷೇತ್ರಗಳಿಗೆ ಅಭ್ಯರ್ಥಿ ಘೊಷಿಸಿದ ಬಿಜೆಪಿ

    ಥ್ಯಾಂಕ್ಯೂ ಮೈ ಲವ್ಸ್​​… ರಶ್ಮಿಕಾ ಹೀಗ್ಯಾಕೆ ಅಂದ್ರು?

    ಕನಕರ ಸಮಾಜಮುಖಿ ಚಿಂತನೆ ಪ್ರಸಾರಕ್ಕೆ ಒತ್ತು; ಶ್ರೀ ನಿರಂಜನಾನಂದಪುರಿ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts