More

    ಟಿಕೆಟ್ ಗುಟ್ಟು ಬಿಟ್ಟುಕೊಡದ ಬಿಜೆಪಿ ನಾಯಕರು; ಮುಂದುವರಿದ ಅಂತಿಮ ಹಂತದ ಕಸರತ್ತು

    ಬೆಂಗಳೂರು:
    ಲೋಕಸಭಾ ಚುನಾವಣೆ ಟಿಕೆಟ್‌ಗಾಗಿ ಅಂತಿಮ ಹಂತದ ಕಸರತ್ತು ಬಿರುಸಿನಿಂದ ನಡೆದಿದ್ದು, ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ.
    ಕೊನೆ ಹಂತದಲ್ಲಿ ಎಲ್ಲಿ ಟಿಕೆಟ್ ಕೈ ತಪ್ಪಿಬಿಡುತ್ತದೊ ಎನ್ನುವ ಆತಂಕದಿಂದ ಆಕಾಂಕ್ಷಿಗಳು, ನಾನಾ ನೆಲೆಗಳಿಂದ ತಮ್ಮ ಮುಖಂಡರ ಮೇಲೆ ರಾಜಕೀಯ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ. ಮಠ, ಮಾನ್ಯಗಳಿಂದಲೂ ಒತ್ತಡ ತರುವ ಪ್ರಯತ್ನ ನಡೆಸಿದ್ದಾರೆ.
    ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ನೇತೃತ್ವದಲ್ಲಿ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆದಿದ್ದು, ಅದರಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಭಾಗವಹಿಸಿದ್ದು, ಅವರಿಗೆ ನಿರ್ಧಿಷ್ಟವಾಗಿ ಎಲ್ಲ ಮಾಹಿತಿಯೂ ಇದೆ. ಆದ್ದರಿಂದ ಅವರುಗಳ ಮೇಲೂ ಪ್ರಭಾವ ಬೀರುವ ಕಸರತ್ತು ನಡೆಸುತ್ತಿದ್ದಾರೆ.
    ದೆಹಲಿಯಿಂದ ಹಿಂತಿರುಗಿರುವ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕೆಲ ಟಿಕೆಟ್ ಆಕಾಂಕ್ಷಿಗಳು ಭೇಟಿ ಮಾಡಿದ್ದು ಚರ್ಚೆ ನಡೆಸಿದರೂ ಅವರು ಯಾವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಎಲ್ಲವೂ ಹೈಕಮಾಂಡ್ ಹಂತದಲ್ಲಿ ಚರ್ಚೆ ಆಗಿದೆ. ಅವರುಗಳೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಏನಿದ್ದರೂ, ವಿಜಯೇಂದ್ರ ಅವರ ಜೊತೆಯಲ್ಲಿ ಸಂಪರ್ಕಿಸಿ ಎನ್ನುವ ಮಾಹಿತಿಯನ್ನು ನೀಡಿ ಕಳುಹಿಸಿದ್ದಾರೆ.
    ಆಸೋಕ್ ಮತ್ತು ವಿಜಯೇಂದ್ರ ಅವರು ಯಾವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಎಲ್ಲವೂ ಹೈಕಮಾಂಡ್ ತೀರ್ಮಾನ ಎಂದು ಅತ್ತು ಕೈ ತೋರಿಸಿ ಆಕಾಂಕ್ಷಿಗಳನ್ನು ಸಾಗ ಹಾಕುತ್ತಿದ್ದಾರೆ. ಪ್ರತಿ ನಿತ್ಯ ಪೋನ್ ಮಾಡಿ ಒತ್ತಡ ತಂತ್ರ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಪೋನ್ ಕರೆ ಸ್ವೀಕರಿಸುವುದು ಕಷ್ಟವಾಗಿದೆ ಎಂದು ಮುಖಂಡರೊಬ್ಬರು ತಮ್ಮ ಇಕ್ಕಟ್ಟಿನ ಪರಿಸ್ಥಿತಿಯನ್ನು ಹೇಳಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts