ಮೊದಲೇ ಹುಲಿಗಳ ಸಂಖ್ಯೆ ಕಡಿಮೆಯಾಗ್ತಿದೆ ಆದ್ರೆ ಸಂತಾನಹರಣಕ್ಕೆ ಮುಂದಾಗಿದೆ ಸರ್ಕಾರ! ಕಾರಣ ಹೀಗಿದೆ... Tigers

Tigers
Published on

Tigers : ಆವಾಸಸ್ಥಾನದ ನಾಶ, ಬೇಟೆ ಮತ್ತು ಇತರ ಮಾನವ ಚಟುವಟಿಕೆಗಳಿಂದಾಗಿ ಜಾಗತಿಕವಾಗಿ ಹುಲಿಗಳ ಸಂಖ್ಯೆ ನಶಿಸುತ್ತಿದೆ. ಹೀಗಿರುವಾಗ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ಆದರೆ, ಮಹಾರಾಷ್ಟ್ರ ಸರ್ಕಾರ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳಲು ಹೊರಟಿದೆ.

ಮಹಾರಾಷ್ಟ್ರದಲ್ಲಿ ಹುಲಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಲು ನಿರ್ಧರಿಸಿರುವುದಾಗಿ ಅಲ್ಲಿನ ರಾಜ್ಯ ಅರಣ್ಯ ಸಚಿವ ಗಣೇಶ್ ನಾಯಕ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಆವಾಸಸ್ಥಾನ ಮತ್ತು ಗಡಿಗಳ ವಿಚಾರವಾಗಿ ಹುಲಿಗಳ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕಳೆದ ವರ್ಷ ಏಪ್ರಿಲ್‌ನಿಂದ ರಾಜ್ಯದಲ್ಲಿ ನಡೆದ ಘರ್ಷಣೆಗಳಲ್ಲಿ 13 ಹುಲಿಗಳು ಮೃತಪಟ್ಟಿವೆ ಎಂದು ಸಚಿವರು ಹೇಳಿದರು.

ಹುಲಿಗಳ ನಡುವೆ ಮಾತ್ರ ಘರ್ಷಣೆಗಳು ನಡೆಯುತ್ತಿಲ್ಲ, ಅರಣ್ಯದ ಅಂಚಿನಲ್ಲಿರುವ ಹಳ್ಳಿಯ ಜನರ ಮೇಲೆಯೂ ಹುಲಿಗಳು ದಾಳಿ ಮಾಡಿ ಕೊಲ್ಲುತ್ತಿವೆ. ಹುಲಿಗಳ ದಾಳಿ ಮತ್ತು ಅವುಗಳ ನಡುವಿನ ಘರ್ಷಣೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಹೊಸ ಪ್ರಸ್ತಾವನೆಗಳನ್ನು ರೂಪಿಸಿದೆ ಎಂದರು.

ಅಂದಹಾಗೆ ಮಹಾರಾಷ್ಟ್ರದಲ್ಲಿ ಹುಲಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಲು ಸರ್ಕಾರದ ಮುಂದೆ ಪ್ರಸ್ತಾಪ ಇಡಲಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಗಣೇಶ್ ನಾಯಕ್ ಬಹಿರಂಗಪಡಿಸಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಅನುಮತಿ ಸಹ ಪಡೆಯಲಾಗುವುದು ಎಂದಿದ್ದಾರೆ.

ಕವ್ವಾ ಜೊತೆಗೆ ಇಂದ್ರಾವತಿ ಮತ್ತು ತಡೋಬಾ ಹುಲಿ ವಲಯಗಳಲ್ಲಿ ಹುಲಿಗಳ ನಡುವೆ ಪ್ರಾಬಲ್ಯಕ್ಕಾಗಿ ಹೋರಾಟ ಮುಂದುವರೆದಂತೆ, ಅವು ಗಡಿ ದಾಟಿ ತೆಲಂಗಾಣವನ್ನು ಪ್ರವೇಶಿಸುತ್ತಿವೆ. ಇದರೊಂದಿಗೆ, ಜಂಟಿ ಆದಿಲಾಬಾದ್ ಜಿಲ್ಲೆಯ ಅರಣ್ಯದ ಸಮೀಪವಿರುವ ಹಳ್ಳಿಗಳ ಜನರು ಎಚ್ಚರದಿಂದಿರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net