More

  ಆಗಸ್ಟ್ 15ರಿಂದ ಬೆಂಗಳೂರಿನಲ್ಲಿ ಮಹಾರಾಜ ಟ್ರೋಫಿ: ಜುಲೈ 25ಕ್ಕೆ ಆಟಗಾರರ ಹರಾಜು ಪ್ರಕ್ರಿಯೆ

  ಬೆಂಗಳೂರು: ರಾಜ್ಯದ ಉದಯೋನ್ಮುಖ ಕ್ರಿಕೆಟಿಗರಿಗೆ ಚಿಮ್ಮು ಹಲಗೆಯಾಗಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಮೊದಲ ಎರಡು ಆವೃತ್ತಿಯ ಯಶಸ್ಸಿನ ಬಳಿಕ ಮೂರನೇ ಆವೃತ್ತಿಯ ಆಯೋಜನೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಸಜ್ಜಾಗಿದೆ. ಆಗಸ್ಟ್ 15ರಂದು ಟೂರ್ನಿಗೆ ಅಧಿಕೃತ ಚಾಲನೆ ದೊರೆಯಲಿದೆ.

  ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಟೂರ್ನಿಯ ಕಮಿಷನರ್ ಹಾಗೂ ಕೆಎಸ್‌ಸಿಎ ಉಪಾಧ್ಯಕ್ಷ ಬಿ.ಕೆ. ಸಂಪತ್ ಕುಮಾರ್ ಮಾಹಿತಿ ನೀಡಿದರು. ಹಿಂದಿನ ಎರಡು ಆವೃತ್ತಿಗಳ ಯಶಸ್ಸಿನೊಂದಿಗೆ ಭಾರತದಲ್ಲಿ ದೇಶೀಯ ಪ್ರೀಮಿಯರ್ ಲೀಗ್ ಆಗಿ ಆಟಗಾರರ ಸಾಮರ್ಥ್ಯ ಅನಾವರಣಕ್ಕೆ ಕೆಎಸ್‌ಸಿಎ ಸಾಕ್ಷಿಯಾಗಲಿದೆ ಎಂದರು.
  ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಮಾತನಾಡಿ, 3ನೇ ಆವೃತ್ತಿಯ ಟೂರ್ನಿ ಆಯೋಜಿಸಲು ನಾವು ಕಾತುರಗೊಂಡಿದ್ದೇವೆ. ರಾಜ್ಯದ ಶ್ರೇಷ್ಠ ಆಟಗಾರರು, ಉದಯೋನ್ಮುಖ ಪ್ರತಿಭೆಗಳಿಗೆ ತಮ್ಮ ಕೌಶಲ್ಯ ಪ್ರದರ್ಶನಕ್ಕೆ ವೇದಿಕೆ ಒದಗಿಸಲು ಕೆಎಸ್‌ಸಿಎ ಬದ್ಧವಾಗಿದೆ. ಕರ್ನಾಟಕ ಕ್ರಿಕೆಟ್ ಶ್ರೀಮಂತ ಪರಂಪರೆಯ ದೊಡ್ಡ ಆಚರಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಆರು ್ರಾಂಚೈಸಿಗಳ (ಹುಬ್ಬಳ್ಳಿ ಟೈಗರ್ಸ್‌, ಬೆಂಗಳೂರು ಬ್ಲಾಸ್ಟರ್ಸ್‌, ಮಂಗಳೂರು ಡ್ರಾೃಗನ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಮೈಸೂರು ವಾರಿಯರ್ಸ್‌, ಶಿವಮೊಗ್ಗ ಲಯನ್ಸ್) ಮಾಲೀಕರು ಹಾಜರಿದ್ದರು.

  ಭಾರತ ತಂಡದಲ್ಲಿ ಸ್ಥಾನ ಪಡೆಯಲು ವೇದಿಕೆ: ಟ್ರೋಫಿ ಅನಾವರಣಕ್ಕೆ ವಿಶೇಷ ಆತಿಥಿಯಾಗಿ ಆಗಮಿಸಿದ್ದ ಭಾರತ ತಂಡದ ದಿಗ್ಗಜ, ಮಾಜಿ ಸ್ಪಿನ್ನರ್, ಇಎಎಸ್ ಪ್ರಸನ್ನ ಅವರು ಮಾತನಾಡಿ, ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ಅಧ್ಭುತ ಅನುಭವ ನೀಡಿದೆ. ರಾಜ್ಯದ ಆಟಗಾರರಿಗೆ ಕೆಎಸ್‌ಸಿಎ ಉತ್ತಮ ವೇದಿಕೆ ಒದಗಿಸಿದ್ದು, ಟೂರ್ನಿಯ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಆಟಗಾರರು ಐಪಿಎಲ್ ಹಾಗೂ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಒಂದು ಮೆಟ್ಟಿಲಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜತೆಗೆ ಯುವ ಆಟಗಾರರರಿಂದ ಉತ್ತಮ ಪ್ರದರ್ಶನವನ್ನು ಎದುರು ನೋಡುತ್ತಿದ್ದೇನೆ ಎಂದರು.

  See also  ಭಾರತದಲ್ಲಿ ಕರೊನಾ: ಹೊಸ ಸೋಂಕಿಗಿಂತ ಹೆಚ್ಚಾದ ಚೇತರಿಕೆ

  ಹರಾಜಿಗೆ 700 ಆಟಗಾರರು: ಆರು ತಂಡಗಳು ಒಳಗೊಂಡ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಜುಲೈ 25ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, 700ಕ್ಕೂ ಹೆಚ್ಚು ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೂರ್ನಿಯ ಎಲ್ಲ 33 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ನಡೆಯಲಿವೆ. ಆಗಸ್ಟ್ 15ರಂದು ಉದ್ಘಾಟನಾ ಪಂದ್ಯ ನಡೆಯಲಿದ್ದು, ಸೆಪ್ಟೆಂಬರ್ 1ರಂದು ೈನಲ್ ಪಂದ್ಯ ನಿಗದಿಪಡಿಸಲಾಗಿದೆ. ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್2, ಸ್ಟಾರ್ ಸ್ಪೋರ್ಟ್ಸ್ ಕನ್ನಡ ಮತ್ತು ್ಯಾನ್‌ಕೋಡ್‌ನಲ್ಲಿ (ಒಟಿಟಿ) ನೇರಪ್ರಸಾರ ಕಾಣಲಿವೆ.

  ಬೆಂಗಳೂರಿನಲ್ಲಿ ಎಲ್ಲ ಪಂದ್ಯಗಳು: ಕಳೆದ ಬಾರಿಯಂತೆ ಈ ಬಾರಿಯೂ ಟೂರ್ನಿಯ ಎಲ್ಲ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದ್ದು, ಆಗಸ್ಟ್‌ನಲ್ಲಿ ಹವಾಮಾನ ವೈಪರೀತ್ಯ, ಮಳೆ ಅಡಚಣೆಯ ನಡುವೆಯೂ ಪಂದ್ಯಗಳನ್ನು ಯಶಸ್ವಿಯಾಗಿ ನಡೆಸಬಹುದು. ಜತೆಗೆ ಪ್ರಸಾರಕರ ಹಿತದೃಷ್ಟಿ, ಕ್ರೀಡಾಂಗಣದ ವಿಶ್ವ ದರ್ಜೆಯ ಒಳಚರಂಡಿ ವ್ಯವಸ್ಥೆ ಟೂರ್ನಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಲಿದೆ ಎನ್ನುವ ಮೂಲಕ ಕೆಎಸ್‌ಸಿಎ ಜಂಟಿ ಕಾರ್ಯದರ್ಶಿ ಶಾವೀರ್ ತಾರಾಪೂರ್, ರಾಜ್ಯದ ಇತರ ತಾಣಗಳಿಗೂ ಟೂರ್ನಿ ವಿಸ್ತರಿಸದಿರುವುದು ಏಕೆ ಎಂಬ ಪ್ರಶ್ನೆಗೆ ವಿವರಣೆ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts