Maha Kumbh 2025 | ತ್ರಿವೇಣಿ ಸಂಗಮದಲ್ಲಿ ಇದುವರೆಗೂ 41 ಕೋಟಿಗೂ ಹೆಚ್ಚು ಭಕ್ತರಿಂದ ಪುಣ್ಯಸ್ನಾನ

Untitled design - 2025-02-09T151917.627
Published on

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಮಹಾಕುಂಭ ಮೇಳದ(Maha Kumbh 2025) 28ನೇ ದಿನವಾದ ಇಂದು(ಭಾನುವಾರ ಫೆಬ್ರವರಿ 9)ಸುಮಾರು 41 ಕೋಟಿ ಭಕ್ತರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.

ಜನವರಿ 13 ರಿಂದ ಮಹಾ ಕುಂಭಮೇಳ ಪ್ರಾರಂಭವಾಗಿದ್ದು ಪ್ರತಿದಿನ ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವ ಮೂಲಕ ಪುಣ್ಯ ಗಳಿಸುತ್ತಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಕೂಡ ಶನಿವಾರ ಪ್ರಯಾಗ್‌ರಾಜ್ ತಲುಪಿ ಸಂಗಮದಲ್ಲಿ ಸ್ನಾನ ಮಾಡಿದರು. ಇದಲ್ಲದೆ, ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಕೂಡ ನಿನ್ನೆ ಸಂಗಮ್ ನಗರಕ್ಕೆ ಆಗಮಿಸಿದರು. ಸ್ನಾನ ಮಾಡಿದ ನಂತರ ಮುಖ್ಯಮಂತ್ರಿ ಭಜನ್‌ಲಾಲ್ ರಾಜಸ್ಥಾನ ಮಂಟಪದಲ್ಲಿ ಪ್ರಸಾದ ವಿತರಿಸಿದರು.

ಪ್ರಯಾಗರಾಜ್‌ನಲ್ಲಿರುವ ತ್ರಿವೇಣಿ ಸಂಗಮವು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾಗಿದೆ. ಪವಿತ್ರ ಸ್ನಾನದ ನಂತರ ಸಿಎಂ ಯಾದವ್ ಅವರು ಸಂಗಮವು ಗಂಗಾ ಮತ್ತು ಯಮುನಾ ಮಾತೆಯಿಂದ ಆಶೀರ್ವದಿಸಲ್ಪಟ್ಟಿದೆ. ಪ್ರಯಾಗ್‌ರಾಜ್ ಎಲ್ಲಾ ತೀರ್ಥಯಾತ್ರೆಗಳಲ್ಲಿ ಅತ್ಯುನ್ನತ ಸ್ಥಳವಾಗಿದೆ. ಆದ್ದರಿಂದ ಇಲ್ಲಿ ಪವಿತ್ರ ಸ್ನಾನ ಮಾಡುವ ಆನಂದವು ಅನೇಕ ಜನ್ಮಗಳ ಪುಣ್ಯದ ನಂತರ ಸಿಗುತ್ತದೆ. ಇಲ್ಲಿ ನಾನು ಮಧ್ಯಪ್ರದೇಶದ ಜನರ ವಿಶೇಷವಾಗಿ ಯುವಕರ ಮತ್ತು ಸಮಾಜದ ಪ್ರತಿಯೊಂದು ವರ್ಗದ ಸಮೃದ್ಧಿಗಾಗಿ ಪ್ರಾರ್ಥಿಸಿದೆ ಸಿಎಂ ಮೋಹನ್ ಯಾದವ್ ಎಂದು ಹೇಳಿದರು.

ಇಂದು ನಾನು ನನ್ನ ಪತ್ನಿಯೊಂದಿಗೆ ಪ್ರಯಾಗರಾಜ್ ಮಹಾಕುಂಭದಲ್ಲಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಹರಿಯುವ ನದಿಗಳನ್ನು ಪೂಜಿಸಿದೆ. ಅದು ನನ್ನಲ್ಲಿ ದೈವಿಕತೆಯ ಭಾವನೆಯನ್ನು ತುಂಬಿತು. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಹರಿವು ಶಾಶ್ವತವಾಗಿ ನಿರಂತರವಾಗಿ ಇರಲಿ ಮತ್ತು ಎಲ್ಲರೂ ಸಮೃದ್ಧಿಯಾಗಿರಲೆಂದು ನಾನು ಬಯಸುತ್ತೇನೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಮೋಹನ್ ಯಾದವ್ ಮಾಡಿರುವ ಪೋಸ್ಟ್​ನಲ್ಲಿ ತಿಳಿಸಿದರು.

ಪೌಷ ಪೂರ್ಣಿಮೆಯಂದು (ಜನವರಿ 13, 2025) ಪ್ರಾರಂಭವಾದ 2025ರ ಮಹಾಕುಂಭವು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭೆಯಾಗಿದ್ದು, ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸುತ್ತದೆ. ಮಹಾ ಕುಂಭಮೇಳವು ಫೆಬ್ರವರಿ 26 ರಂದು ಮಹಾ ಶಿವರಾತ್ರಿಯವರೆಗೆ ಮುಂದುವರಿಯುತ್ತದೆ. ಈ ಕಾರ್ಯಕ್ರಮವು ಈಗಾಗಲೇ ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಭಕ್ತರನ್ನು ಆಕರ್ಷಿಸಿದೆ ಮತ್ತು ಹಾಜರಾತಿ ಮತ್ತು ಭಾಗವಹಿಸುವಿಕೆಯ ಹೊಸ ದಾಖಲೆಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net