PHOTOS| ಜಾದೂಗಾರ ಆಕರ್ಷ್​ ಜತೆ ರಾಧಿಕಾ ಕಲ್ಯಾಣ

Radhika
Published on

ಬೆಂಗಳೂರು: ಕಿರುತೆರೆ-ಹಿರಿತೆರೆಗಳಲ್ಲಿ ಅಭಿನಯಿಸಿರುವ ನಟಿ ರಾಧಿಕಾ ರಾವ್ ಗುರುವಾರ ಆಕರ್ಷ್ ಭಟ್ ಜತೆ ವಿವಾಹ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡಿದ್ದಾರೆ. ಇಬ್ಬರೂ ಕರಾವಳಿಯವರೇ ಆಗಿರುವುದರಿಂದ ಇವರ ಮದುವೆ ಮೂಡಬಿದ್ರೆಯಲ್ಲಿ ಉಭಯ ಕುಟುಂಬಸ್ಥರು ಹಾಗೂ ಬಂಧು-ಬಳಗದ ಸಮ್ಮುಖದಲ್ಲಿ ನೆರವೇರಿದೆ.

‘ಹುಬ್ಬಳ್ಳಿ ಹುಡ್ಗ ಮಂಗ್ಳೂರು ಹುಡ್ಗಿ’, ‘ರಾಧಾ ಕಲ್ಯಾಣ’ ಖ್ಯಾತಿಯ ರಾಧಿಕಾ ರಾವ್, ‘ಲುಂಗಿ’ ಹಾಗೂ ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆಕರ್ಷ್ ಭಟ್ ಜನಪ್ರಿಯ ಜಾದೂಗಾರರಷ್ಟೇ ಅಲ್ಲ, ಮೈಂಡ್ ರೀಡರ್ ಸಹ ಹೌದು.

2019ರ ಮಾರ್ಚ್​ನಲ್ಲಿ ಇವರಿಬ್ಬರ ಪರಿಚಯವಾಗಿದ್ದು, ಕ್ರಮೇಣ ಪ್ರೇಮಾಂಕುರವಾಗಿತ್ತು. ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಆಕರ್ಷ್ ಮತ್ತು ರಾಧಿಕಾ ಮದುವೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net