

ಬೆಂಗಳೂರು: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ತಮನ್ನಾ ಭಾಟಿಯಾ ಅವರನ್ನು ಬಂಧಿಸುವಂತೆ ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಜಾಹೀರಾತಿನ ಮೂಲಕ ಆನ್ಲೈನ್ನಲ್ಲಿ ಗ್ಯಾಂಬ್ಲಿಂಗ್ಗೆ ಪ್ರಚೋದನೆ ನೀಡುತ್ತಿರುವುದಕ್ಕೆ ಇವರನ್ನು ಬಂಧಿಸಬೇಕು ಎಂದು ಚೆನ್ನೈ ಮೂಲದ ವಕೀಲರು ಕೋರ್ಟ್ ಮೊರೆ ಹೋಗಿದ್ದಾರೆ. ಯುವಕರಿಗೆ ಮಾರ್ಗದರ್ಶನ ಹಾಗೂ ತಿಳುವಳಿಕೆ ನೀಡುವಂಥ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಬದಲಿಗೆ ಕೆಟ್ಟ ಹಾದಿ ಹಿಡಿಯಲು ಪ್ರಚೋದಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.