

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಪೆರಾಜೆಯ ಆರ್.ಎ.ಶರತ್ ಎಂಬುವರ ರಬ್ಬರ್ ತೋಟದಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅರುಣ್ಕುಮಾರ್ (31), ಸಿರಿಯಾಕ್ ಕುರಿಯನ್(54) ಸಿ.ರಜನೀಶ್(32) ಬಂಧಿತ ಆರೋಪಿಗಳು.
ಶರತ್ ಅವರು ತಮ್ಮ ತೋಟದ ಲೈನ್ಮನೆಯ ಎದುರು ಶೇಖರಿಸಿಟ್ಟಿದ್ದ ಸುಮಾರು 2 ಲಕ್ಷದ 10 ಸಾವಿರ ರೂ. ಬೆಲೆ ಬಾಳುವ ರಬ್ಬರ್ ಶೀಟ್ ಹಾಗೂ ರಬ್ಬರ್ ಸ್ಕ್ರಾಪ್ಗಳನ್ನು ಅದೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಿರಿಯಾಕ್ ಕುರಿಯನ್, ಅರುಣ್ಕುಮಾರ್ ಹಾಗೂ ರಜನೀಶ್, ಬಿನಯ್ ಎಂಬವರು ಕಳವು ಮಾಡಿದ್ದು, ಈ ಬಗ್ಗೆ ಶರತ್ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ನಡೆಸಿದ ಪೊಲೀಸರು ಆರೋಪಿಗಳು ಕೃತ್ಯಕ್ಕೆ ಬಳಸಿದ ಪಿಕ್ಅಪ್ ವಾಹನ ಹಾಗೂ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಬಿನಯ್ ತಲೆಮರೆಸಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ.ದಿನೇಶ್ಕುಮಾರ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತನಿರೀಕ್ಷಕ ಸಿ.ಎನ್.ದಿವಾಕರ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಎಚ್.ವಿ.ಚಂದ್ರಶೇಖರ್, ಸಿಬ್ಬಂದಿ ತೀರ್ಥಕುಮಾರ್, ಪ್ರೇಮ್ಕುಮಾರ್, ಶಿವರಾಜೇಗೌಡ, ಕಲ್ಲಪ್ಪ ಹಿಟ್ನಾಳ್, ಸೋಮಶೇಖರ್, ಅನಿಲ್ ಮತ್ತು ಚಾಲಕರಾದ ಪ್ರವೀಣ್ಕುಮಾರ್ ನಾಗರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.