More

    ಪನೋರಮಾಗೆ ‘ಮಧ್ಯಂತರ’; ಇದು ಸಿನಿಮಾ ಕುರಿತಾದ ಸಿನಿಮಾ

    ಬೆಂಗಳೂರು: ಗೋವಾದ ಪಣಜಿಯಲ್ಲಿ ನವೆಂಬರ್​ 20ರಿಂದ 28ರವರೆಗೂ ನಡೆಯಲಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗದ ನಾನ್​-ಫೀಚರ್​ ವಿಭಾಗದಲ್ಲಿ ಈ ಬಾರಿ ದಿನೇಶ್​ ಶೆಣೈ ನಿರ್ದೇಶನದ ‘ಮಧ್ಯಂತರ – ದಿ ಇಂಟರ್​ಮಿಷನ್​’ ಎಂಬ ಚಿತ್ರವೂ ಆಯ್ಕೆಯಾಗಿದೆ.

    39 ನಿಮಿಷಗಳ ಅವಧಿಯ ಈ ಚಿತ್ರವು ಸಿನಿಮಾದ ಕುರಿತದ್ದಾಗಿದೆ. 1976ರಿಂದ 1985ರವರೆಗಿನ ಕಾಲಘಟ್ಟದಲ್ಲಿ ನಡೆಯುವ ಒಂದು ಕಥೆಯನ್ನು ಈ ಕಿರುಚಿತ್ರದ ಮೂಲಕ ಕಟ್ಟಿಕೊಡಲಾಗಿದೆ.

    ಇದನ್ನೂ ಓದಿ: ಮಕ್ಕಳಿಗೆ ಪಟಾಕಿ ಹೊಡೆಸಿ ದೀಪಾವಳಿ ಆಚರಿಸಿದ ಯಶ್​

    ‘ಮಧ್ಯಂತರ’ದ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ನಿರ್ದೇಶಕ ಶೆಣೈ, ‘ನಾನು ಮೂಲತಃ ಬಂಟ್ವಾಳದವನು. ಕಳೆದ 25 ವರ್ಷಗಳಿಂದ ದೆಹಲಿಯಲ್ಲಿದ್ದೇನೆ. ಅಲ್ಲಿ ಛಾಯಾಗ್ರಾಹಕನಾಗಿ ಕಾರ್ಪೋರೇಟ್​ ಸಿನಿಮಾಗಳು ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದ. ಲಾಕ್​ಡೌನ್​ ಸಂದರ್ಭದಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಒಂದಿಷ್ಟು ಸಂದರ್ಶನಗಳನ್ನು ನೋಡುವ ಅವಕಾಶ ಸಿಕ್ಕಿತು. 70ರ ಮಧ್ಯಭಾಗದಿಂದ 90ರ ಮಧ್ಯಭಾಗದವರೆಗಿನ ಒಂದಿಷ್ಟು ವಿಚಾರಗಳನ್ನು ಹಲವರು ಮಾತನಾಡಿದ್ದನ್ನು ಕೇಳಿದೆ. ಅದನ್ನು ಸ್ಫೂರ್ತಿಯಾಗಿಸಿಕೊಂಡು ಒಂದು ಸ್ಕ್ರಿಪ್ಟ್​ ಬರೆದೆ. ಕಲಾ ನಿರ್ದೇಶಕ ಶಶಿಧರ ಅಡಪ ಅವರು ನನ್ನ ಹಳೆಯ ಸ್ನೇಹಿತರು. ಅವರೊಂದಿಗೆ ನನ್ನ ಐಡಿಯಾ ಹಂಚಿಕೊಂಡೆ. ಅವರು ಈ ಚಿತ್ರ ಮಾಡುವುದಕ್ಕೆ ಹುರುದಿಂಬಿಸಿದರು’ ಎನ್ನುತ್ತಾರೆ.

    ಚಿತ್ರದ ಪ್ರೀ-ಪ್ರೊಡಕ್ಷನ್​ ಮತ್ತು ತಯಾರಿ ಕೆಲಸಗಳಿಗೆ ಕಳೆದ ವರ್ಷದ ಕೊನೆಯಲ್ಲಿ ಬೆಂಗಳೂರಿಗೆ ಬಂದ ಅವರು, ಇಲ್ಲಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡರಂತೆ. ಕೊನೆಗೆ ಸೆಟ್​ಗಳನ್ನು ನಿರ್ಮಾಣ ಮಾಡಿ, 16 ಎಂಎಂ ನೆಗೆಟಿವ್​ನಲ್ಲೇ ಈ ಕಿರುಚಿತ್ರದ ಚಿತ್ರೀಕರಣ ಮಾಡಲಾಗಿದೆಯಂತೆ.

    ಇದನ್ನೂ ಓದಿ: ಆಲಿಯಾ ಭಟ್​ ಕಂಡ್ರೆ ಜಾಹ್ನವಿಗೆ ಬಹಳ ಇಷ್ಟವಂತೆ; ಯಾಕೆ ಗೊತ್ತಾ?

    ‘ಇದು ಇಬ್ಬರು ಹುಡುಗರ ಕಥೆ. ದಾವಣಗೆರೆಯ ಹೋಟೆಲ್​ನಲ್ಲಿ ಕೆಲಸ ಮಾಡುವ ಹುಡುಗರು ಚಿತ್ರಪ್ರೇಮಿಗಳು. ತಮ್ಮೂರಿಗೆ ಬರುವ ಚಿತ್ರತಂಡದ ಜತೆಗೆ ಬೆಂಗಳೂರಿಗೆ ಬಂದು ಇಲ್ಲಿ ಸಿನಿಮಾ ಮಾಡುವ ಪ್ರಯತ್ನವೇ ಈ ಚಿತ್ರದ ಕಥೆ. 70 ಮತ್ತು 80ರ ದಶಕದಲ್ಲಿ ಕನ್ನಡ ಚಿತ್ರರಂಗ ಬೆಳೆದು ಬಂದ ಕಥೆ ಇರುವ ಈ ಚಿತ್ರದಲ್ಲಿ ಸಾಕಷ್ಟು ರಂಗಭೂಮಿ ಕಲಾವಿದರು ಇದ್ದಾರೆ. ವೀರೇಶ್​, ಅಜಯ್​ ನೀನಾಸಂ, ರಮೇಶ್​ ಪಂಡಿತ್​, ಶಿವು ನೀನಾಸಂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ ಶೆಣೈ.

    ಇನ್​ಫೋಕಸ್​ ಪಿಕ್ಚರ್ಸ್​ ಎಂಬ ಸಂಸ್ಥೆಯಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸುನೀಲ್​ ಬಾರ್ಕೂರು ಅವರ ಛಾಯಾಗ್ರಹಣ ಮತ್ತು ಸುರೇಶ್​ ಅರಸ್​ ಅವರ ಸಂಕಲನವಿದೆ. ಇನ್ನು, ಶಶಿಧರ್​ ಅಡಪ ಅವರು ಪ್ರೊಡಕ್ಷನ್​ ಡಿಸೈನರ್​ ಆಗಿ ಕೆಲಸ ನಿರ್ವಹಿಸಿದ್ದಾರೆ.

    ಇನ್ನೊಂದು ಹೊಸ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಿವಣ್ಣ; ಮುಂದಿನ ವರ್ಷ ಪ್ರಾರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts