ಆಲಿಯಾ ಭಟ್​ ಕಂಡ್ರೆ ಜಾಹ್ನವಿಗೆ ಬಹಳ ಇಷ್ಟವಂತೆ; ಯಾಕೆ ಗೊತ್ತಾ?

Alia - Jahnvi
Published on

ಮುಂಬೈ: ಜಾಹ್ನವಿ ಕಪೂರ್​ ಅಭಿನಯದ 'ಮಿಲಿ' ಚಿತ್ರವು ನವೆಂಬರ್​ 4ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಈ ಮಧ್ಯೆ, ಚಿತ್ರದ ಪ್ರಚಾರದಲ್ಲಿ ಜಾಹ್ನವಿ ತೊಡಗಿಸಿಕೊಂಡಿದ್ದು, ಬೇರೆಬೇರೆ ಊರುಗಳಿಗೆ ಹೋಗಿ ಚಿತ್ರದ ಪ್ರಚಾರ ಮಾಡಿ ಬರುತ್ತಿದ್ದಾರೆ.

ಹೀಗೆಯೇ ಒಂದು ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಜಾಹ್ನವಿಗೆ ನಿಮ್ಮ ಮೆಚ್ಚಿನ ನಟಿ ಯಾರು ಎಂದು ಕೇಳಲಾಗಿದೆ. ಬಹುಶಃ ಜಾಹ್ನವಿ ತನ್ನಮ್ಮ ದಿವಂಗತ ಶ್ರೀದೇವಿ ಅವರ ಹೆಸರನ್ನು ಎತ್ತಿರಬಹುದು ಎಂದುಕೊಂಡರೆ ಅದು ತಪ್ಪು. ತನ್ನ ಇಷ್ಟದ ನಟಿ ಪಟ್ಟವನ್ನು ಜಾಹ್ನವಿ ಕೊಟ್ಟಿರುವುದು ಆಲಿಯಾ ಭಟ್​.

ಈ ಕುರಿತು ಮಾತನಾಡಿರುವ ಜಾಹ್ನವಿ, 'ಆಲಿಯಾ ನನ್ನ ನೆಚ್ಚಿನ ನಟಿ ಮತ್ತು ಅವರೇ ನನ್ನ ಸ್ಫೂರ್ತಿ. ಯಾಕೆ ಎಂದು ಹೇಳುವುದು ಕಷ್ಟ. ಬರೀ ನಾನೊಬ್ಬಳಲ್ಲ, ನನ್ನಂತಹ ಹಲವು ಹುಡುಗಿಯರಿಗೆ ಅವರು ಸ್ಫೂರ್ತಿಯಾಗುವುದರ ಜತೆಗೆ, ಜೀವನದಲ್ಲಿ ಸಾಧಿಸುವುದಕ್ಕೆ ಅವರು ಪ್ರೇರೇಪಿಸುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಚಿತ್ರಗಳು ಮತ್ತು ಪಾತ್ರಗಳಿಂದ ನಮಗೆಲ್ಲರಿಗೂ ಹೆಮ್ಮೆ ತಂದಿದ್ದಾರೆ' ಎಂದು ಹೇಳಿಕೊಂಡಿದ್ದಾರೆ.

'ಮಿಲಿ' ಚಿತ್ರವು ಮಲಯಾಳಂ ಚಿತ್ರ 'ಹೆಲೆನ್​'ನ ರೀಮೇಕ್​ ಆಗಿದ್ದು, ಈ ಚಿತ್ರವನ್ನು ಜಾಹ್ನವಿ ತಂದೆ ಬೋನಿ ಕಪೂರ್​ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರೊಂದಿಗೆ ಸನ್ನಿ ಕೌಶಾಲ್​, ಮನೋಜ್​ ಪಾಹ್ವ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net