ಭೋಪಾಲ್: ದೇವಸ್ಥಾನಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳಿಂದ (Loud Speakers) ಹೆಚ್ಚು ಶಬ್ದ ಮಾಲಿನ್ಯವಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಐಎಎಸ್ ಅಧಿಕಾರಿಯೊಬ್ಬರು (IAS Officer) ವಿವಾದವನ್ನು ಹುಟ್ಟುಹಾಕಿದ್ದಾರೆ. ಮಧ್ಯಪ್ರದೇಶ ಮೂಲದ ಐಎಎಅಸ್ ಅಧಿಕಾರಿ ಶೈಲಬಾಲಾ ಮಾರ್ಟಿನ್ ಈ ಬಗ್ಗೆ ಪೋಸ್ಟ್ ಮಾಡಿದ್ದು, ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ದೇವಾಲಯಗಳು ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಬಗ್ಗೆ ಅಧಿಕಾರಿ ಪ್ರಶ್ನೆಗಳನ್ನು ಎತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಐಎಎಸ್(IAS) ಅಧಿಕಾರಿಯ ಈ ನಡೆ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಸರ್ಕಾರ ಕ್ರಮ ಜರುಗಿಸುತ್ತ ಎಂದು ಕಾದು ನೋಡಬೇಕಿದೆ.
ಮಸೀದಿಗಳ ಧ್ವನಿವರ್ಧಕಗಳಿಂದ ಆಜಾನ್ ಶಬ್ದವು ಜನರಿಗೆ ತೊಂದರೆ ಉಂಟುಮಾಡುತ್ತಿರುವಾಗ ಮಸೀದಿಗಳ ಮುಂದೆ ಡಿಜೆ ನುಡಿಸಿದರೆ ಅವರಿಗೆ ಏಕೆ ತೊಂದರೆಯಾಗಬೇಕು? ಎಂಬ ವಾದ ಸಾಮಾಜಿಕ ಜಾಲತಾಣಗಳಲ್ಲಿ ಉಂಟಾಗಿದೆ. ಮಸೀದಿಗಳಿಂದ ಹೊರಬರುತ್ತಿರುವ ಶಬ್ದ ಜನರನ್ನು ಡಿಸ್ಟರ್ಬ್ ಮಾಡುತ್ತಿದೆ ಎಂದು ಪತ್ರಕರ್ತರೊಬ್ಬರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಐಎಎಸ್ ಅಧಿಕಾರಿ ಶೈಲಬಾಲಾ ಮಾರ್ಟಿನ್, ದೇವಸ್ಥಾನಗಳಲ್ಲಿ ಕೂಡ ಲೌಡ್ಸ್ಪೀಕರ್ಗಳನ್ನು ಹಾಕಲಾಗುತ್ತದೆ. ಅದರಿಂದಲೂ ಶಬ್ದ ಮಾಲಿನ್ಯ ಉಂಟಾಗುತ್ತದೆ. ತಡರಾತ್ರಿವರೆಗೂ ಕಾರ್ಯಕ್ರಮಗಳನ್ನು ನಡೆಸಿದಾಗ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು. ಈ ವಿಚಾರ ಇದೀಗ ಹೊಸ ಚರ್ಚೆಯನ್ನ ಹುಟ್ಟುಹಾಕಿದೆ.
ಶೈಲಬಾಲಾ ಮಾರ್ಟಿನ್ ಅವರು 2009ರ ಬ್ಯಾಚ್‌ನ ಹಿರಿಯ ಐಎಎಸ್ ಅಧಿಕಾರಿಯಾಗಿದ್ದು (IAS Officer), ಪ್ರಸ್ತುತ ಮಧ್ಯಪ್ರದೇಶದ ಆಡಳಿತ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಇಂದೋರ್‌ನವರಾದ ಅವರು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇವರು ಪತ್ರಕರ್ತ ರಾಕೇಶ್ ಪಾಠಕ್ ಅವರನ್ನು 56ನೇ ವಯಸ್ಸಿನಲ್ಲಿ ಮದುವೆಯಾಗಿದ್ದರು.
Bengaluru| ನಿರಂತರ ಮಳೆಯಿಂದಾಗಿ ನಿರ್ಮಾಣ ಹಂತದ ಕಟ್ಟಡ ಕುಸಿತ; ಓರ್ವ ಸಾವು, ಐವರು ನಾಪತ್ತೆ
ಬೋಲ್ಡ್ ಹುಡುಗಿಯರು ಇತಿಹಾಸ ನಿರ್ಮಿಸುತ್ತಾರೆ; ವಿವಾದದ ನಡುವೆ Salman Khan ಮಾಜಿ ಗೆಳತಿಯ ಪೋಸ್ಟ್ ವೈರಲ್