ಜಿಮ್​ನಲ್ಲಿ ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದ ಕಳ್ಳ! ಮಾಲೀಕ ಕೊಟ್ಟ ಶಿಕ್ಷೆ ಎಂತಹದ್ದು ಗೊತ್ತಾ..?

thief
Published on

ಭೋಪಾಲ್​: ಜಿಮ್‌ನಲ್ಲಿ ಕಳ್ಳತನ ಮಾಡಲು ಬಂದಿದ್ದ ಯುವಕ ಸಿಕ್ಕಿಬಿದ್ದಿದ್ದಾನೆ. ಜಿಮ್ ಮಾಲೀಕರು ಅನಿರೀಕ್ಷಿತ ಶಿಕ್ಷೆ ನೀಡಿದ ನಂತರ ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಯಿತು. ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಈ ಘಟನೆ ಸದ್ಯ ವೈರಲ್ ಆಗಿದೆ.

ಇತ್ತೀಚಿಗೆ ಒಂದು ರಾತ್ರಿ, ಹದಿಹರೆಯದ ಕಳ್ಳ ಶಟರ್ ಮೀಟಿ ಜಿಮ್ ಅನ್ನು ಪ್ರವೇಶಿಸಿದ್ದಾನೆ. ಆದರೆ ಯಾವುದನ್ನು ಕದಿಯುವುದೆಂದು ಯೋಚಿಸುತ್ತಾ ಅಲ್ಲಿಯೇ ಅಲೆದಾಡಿದ್ದಾನೆ. ಅದೇ ಸಮಯದಲ್ಲಿ ತನ್ನ ಮನೆಯಲ್ಲಿ ಗಾಢ ನಿದ್ದೆಯಲ್ಲಿದ್ದ ಜಿಮ್ ಮಾಲೀಕನಿಗೆ ಎಚ್ಚರವಾಗಿದೆ. ಕೂಡಲೇ ತನ್ನ ಫೋನ್ ತೆಗೆದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾನೆ. ಆಗ ಕಳ್ಳ ಒಳಗಿರುವುದು ಕಂಡು ಬಂದಿದೆ.

ಕೂಡಲೇ ಜಿಮ್‌ಗೆ ಧಾವಿಸಿ ಬಾಲಕನನ್ನು ಮಾಲೀಕ ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾನೆ. ಇದ್ದಕ್ಕಿದ್ದಂತೆ ಮಾಲೀಕ ಕಾಣಿಸಿಕೊಂಡಿದ್ದನ್ನು ಹುಡುಗ ಕಂಡು ದಿಗ್ಭ್ರಮೆಗೊಂಡಿದ್ದಾನೆ. ಆಗ ಮಾಲೀಕರು ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುವ ಮೂಲಕ ಬಾಲಕನಿಗೆ ಶಿಕ್ಷೆ ವಿಧಿಸಿದ್ದಾರೆ. ಕೊನೆಗೆ ಅವನನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ.

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಕಳೆದ ವಾರ ಕಳ್ಳನೊಬ್ಬ ಕುಡಿದ ಮತ್ತಿನಲ್ಲಿ ನಿದ್ದೆಗೆ ಜಾರಿದ್ದ. ಮರುದಿನ ಎಚ್ಚರವಾದಾಗ ಸುತ್ತಮುತ್ತ ಪೊಲೀಸರನ್ನು ಕಂಡು ಬೆಚ್ಚಿಬಿದ್ದಿದ್ದ. ಮನೆಯಲ್ಲಿ ಎಸಿ ಹಾಕಿದ್ದರಿಂದ ಕುಡಿದ ಅಮಲಿನಲ್ಲಿ ಆತ ನೆಮ್ಮದಿಯಿಂದ ಮಲಗಿದ್ದ ಎಂದು ಪೊಲೀಸರು ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net