

ವಿಜಯವಾಣಿ ಸುದ್ದಿಜಾಲ ಉಡುಪಿ
ಕರಾವಳಿ ಕರ್ನಾಟಕದ ರಂಗೋಲಿ ಕಲೆ ವಿಷಯದಲ್ಲಿ ಸಂಶೋಧನೆ ಮಾಡಿ, ರಂಗೋಲಿ ಕಲೆಯಲ್ಲಿ ವಿಶ್ವದಾಖಲೆ ಮಾಡಿದ್ದ ಭಾರತಿ ಮರವಂತೆ ಅವರಿಗೆ ಮಧುರಚೆನ್ನ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯದ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗುರುರಾಜ ಹೊಸಕೋಟೆ, ಡಾ. ಸಿ.ಸೋಮಶೇಖರ, ಡಾ. ಎಸ್. ಬಾಲಾಜಿ, ಡಾ.ಅಲ್ಲಮಪ್ರಭು ಮಹಾಸ್ವಾಮಿ, ಪ್ರಭು ಚನ್ನಬಸವ ಸ್ವಾಮೀಜಿ ಇತರರು ಉಪಸ್ಥಿತರಿದ್ದರು.
ಭಾರತಿ ಮರವಂತೆ ಅವರು ರಂಗೋಲಿ ಕಲಾ ಪ್ರದರ್ಶನ, ರಂಗೋಲಿ ಕ್ಯಾನ್ವಾಸ್ ಪೇಂಟಿಂಗ್, ರಂಗೋಲಿ ತರಬೇತಿ, ನಾಟಕ ಅಕಾಡೆಮಿಯಿಂದ ಕಲಾವಿದರ ಫೆಲೋಶಿಪ್, ರಂಗೋಲಿ ಕೃತಿಗಳು, ಪತ್ರಿಕೆಗಳಲ್ಲಿ ರಚಿಸಿದ ರಂಗೋಲಿ ಚಿತ್ರಗಳ ಪ್ರಕಟಣೆ, ರಂಗೋಲಿ ಪತ್ರಿಕೆ ಸಂಪಾದಕಿಯಾಗಿ ಹಲವು ಸಾಧನೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ಅವರು ರಚಿಸಿದ್ದ ರಂಗೋಲಿ ಕಲೆಯ ಮೂಲಕ ವಿಶ್ವ ದಾಖಲೆಗೂ ಭಾಜನರಾಗಿದ್ದಾರೆ.