ಮಂಗಳೂರು- ಮಡಗಾಂವ್ ನಡುವೆ 3 ದಿನಗಳ ಮೆಮು ಸ್ಪೆಷಲ್ ರೈಲು ಆರಂಭ

train
Published on

ಮಂಗಳೂರು : ಪ್ರಯಾಣಿಕರ ದಟ್ಟಣೆ ನಿರ್ವಹಣೆ ಉದ್ದೇಶದಿಂದ ನೈರುತ್ಯ ರೈಲ್ವೆ ಮಾದರಿ ಕೊಂಕಣ ರೈಲ್ವೆ ಕೂಡ ಮಂಗಳೂರು ಜಂಕ್ಷನ್ ಮತ್ತು ಮಡಗಾಂವ್ ನಡುವೆ ಮೂರು ದಿನಗಳ ಮೆಮು ಸ್ಪೆಷಲ್ ರೈಲು ಸೇವೆಯನ್ನು (07107/ 07108) ಶನಿವಾರ ಆರಂಭಿಸಿದೆ.
ಶನಿವಾರ, ಭಾನುವಾರ ಮತ್ತು ಸೋಮವಾರ ಈ ರೈಲು ಸಂಚರಿಸಲಿದೆ. ಮಡಗಾಂವ್- ಮಂಗಳೂರು ಜಂಕ್ಷನ್ ರೈಲು ಮೆಮು ಸ್ಪೆಷಲ್ (07107) ಜುಲೈ 20 ರಂದು ಶನಿವಾರ ಬೆಳಗ್ಗೆ 6 ಗಂಟೆಗೆ ಮಡಗಾಂವ್‌ನಿಂದ ಹೊರಟು ಮಧ್ಯಾಹ್ನ 12.15 ಕ್ಕೆ ಮಂಗಳೂರು ಜಂಕ್ಷನ್ ತಲುಪಿದೆ. ಬಳಿಕ ರೈಲು ನಂಬರ್ 07108 ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಮಧ್ಯಾಹ್ನ 12.40 ಕ್ಕೆ ಹೊರಟು ರಾತ್ರಿ 7 ಗಂಟೆಗೆ ಮಡಗಾಂವ್ ತಲುಪಿದೆ.
ಈ ರೈಲು ಇದೇ ವೇಳಾಪಟ್ಟಿಯಲ್ಲಿ ಜುಲೈ 21 ಮತ್ತು 22 ರಂದು ಸಂಚರಿಸಲಿದೆ.
ಎಲ್ಲೆಲ್ಲಿ ನಿಲುಗಡೆ?
ಕಣಕೋಣ, ಕಾರವಾರ, ಹರ್ವಾಡ, ಅಂಕೋಲ, ಗೋಕರ್ಣ ರೋಡ್, ಮಿರ್ಜಾನ, ಕುಮಟ, ಹೊನ್ನಾವರ, ಮಂಕಿ, ಮುರ್ಡೇಶ್ವರ, ಭಟ್ಕಳ, ಶಿರೂರು, ಮೂಕಾಂಬಿಕಾ ರೋಡ್ (ಬೈಂದೂರು), ಬಿಜೂರು, ಸೇನಾಪುರ, ಕುಂದಾಪುರ, ಬಾರಕೂರು, ಉಡುಪಿ, ಮುಲ್ಕಿ, ಸುರತ್ಕಲ್, ತೋಕೂರು ನಿಲ್ದಾಣಗಳಲ್ಲಿ ಈ ರೈಲಿಗೆ ನಿಲುಗಡೆ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net