ಲೂಧಿಯಾನ ಜೈಲು ಪ್ರವೇಶಿಸಿದ ಕರೊನಾ ವೈರಾಣು, ವಿಚಾರಣಾಧೀನ ಮಹಿಳಾ ಕೈದಿಗೆ ಸೋಂಕು

covid
Published on

ಲೂಧಿಯಾನ: ಕರೊನಾ ವೈರಾಣು ಇದೀಗ ಜೈಲುಗಳನ್ನು ಪ್ರವೇಶಿಸಿದೆ. ಇತ್ತೀಚೆಗೆ ಬಂಧಿಸಲಾಗಿದ್ದ ಮಹಿಳಾ ಕೈದಿಯೊಬ್ಬರಿಗೆ ಸೋಂಕು ತಗುಲಿರುವುದು ಖಚಿತಪಟ್ಟಿರುವ ಹಿನ್ನೆಲೆಯಲ್ಲಿ ಲೂಧಿಯಾನ ಕೇಂದ್ರ ಕಾರಾಗೃಹದಲ್ಲಿ ಆತಂಕ ಮನೆ ಮಾಡಿದೆ.

ಕರೊನಾ ಸೋಂಕಿತ ಕೈದಿಯನ್ನು ಸರ್ಕಾರಿ ಆಸ್ಪತ್ರೆಯ ಐಸೋಲೇಷನ್​ ವಾರ್ಡ್​ಗೆ ಶಿಫ್ಟ್​ ಮಾಡಲಾಗಿದೆ. ಸದ್ಯಕ್ಕೆ ಅವರಿಗೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಲೂಧಿಯಾನ ಕೇಂದ್ರ ಕಾರಾಗೃಹದ ವೈದ್ಯರು ತಿಳಿಸಿದ್ದಾರೆ.

ಸೋಂಕಿತೆಯ ಬಗ್ಗೆ ಮಾಹಿತಿ ನೀಡಿರುವ ಅವರು, ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಏ.28ರಂದು ಮಹಿಳೆಯನ್ನು ಬಂಧಿಸಿ, ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಜೈಲಿಗೆ ಬರುತ್ತಲೇ ಆಕೆಯನ್ನು ಪರೀಕ್ಷಿಸಲಾಗಿತ್ತು. ಆಗ ಆಕೆಯಲ್ಲಿ ಕರೊನಾ ಸೋಂಕಿನ ಲಕ್ಷಣ ಕಂಡುಬಂದಿರಲಿಲ್ಲ ಎಂದು ವಿವರಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಆಕೆಯನ್ನು ಜೈಲಿನ ಆಸ್ಪತ್ರೆಯಲ್ಲಿರುವ ಐಸೋಲೇಷನ್​ ವಾರ್ಡ್​ನಲ್ಲಿ ಇರಿಸಲಾಗಿತ್ತು. ಇಲ್ಲಿ ಆಕೆಯಲ್ಲದೆ ಇತ್ತಿಚೆಗಷ್ಟೇ ಬಂಧಿಸಲ್ಪಟ್ಟಿದ್ದ ಇನ್ನೂ 16 ಮಹಿಳಾ ಕೈದಿಗಳು ಇದ್ದರು. ಇದೀಗ ಅವರೆಲ್ಲರ ಗಂಟಲ ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ. ಐಸೋಲೇಷನ್​ ವಾರ್ಡ್​ನ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್​ ಅಧಿಕಾರಿಗಳು ಕೂಡ ಕೋವಿಡ್​ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net