

ಗೋಳಿಯಂಗಡಿ: ಶಿಕ್ಷಕರು ವೃತ್ತಿ ಜೀವನದಲ್ಲಿ ನಿಷ್ಠೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದಾಗ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗೌರವವಿದೆ, ಮಕ್ಕಳಿಗೆ ಶಿಕ್ಷಣ ನೀಡಿ, ಉತ್ತಮ ಭವಿಷ್ಯ ರೂಪಿಸುವ ಶಿಕ್ಷಕ ವೃತ್ತಿ ಜೀವನ ಶ್ರೇಷ್ಠವಾದದ್ದು ಎಂದು ಹಳ್ಳಿ ವೆಂಕಟೇಶ್ ಭಟ್ ಹೇಳಿದರು.
ಹಿಲಿಯಾಣ ಶ್ರೀಬ್ರಹ್ಮಬೈದರ್ಕಳ ಗರೋಡಿಯಲ್ಲಿ ಸಿಂಹ ಸಂಕ್ರಮಣದ ಪ್ರಯುಕ್ತ ವಿಶೇಷ ಪೂಜೆ, ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಲಿಯಾಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8 ವರ್ಷ ಮುಖ್ಯ ಶಿಕ್ಷಕಿಯಾಗಿ ಸೇವಾ ನಿವೃತ್ತಿಗೊಂಡ ಮುಖ್ಯ ಶಿಕ್ಷಕಿ ಪ್ರೇಮಾವತಿ ವಿ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಬಿ.ಗಣೇಶ್ ಕಿಣಿ ಬೆಳ್ವೆ, ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಸತೀಶ್ ಕಿಣಿ ಬೆಳ್ವೆ, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ್ಗೋಳಿ, ಲಯನ್ಸ್ ಕ್ಲಬ್ ವಲಯ ಕಾರ್ಯದರ್ಶಿ ವೈ.ಪಟ್ಟಾಭಿರಾಮ್ ಭಟ್ ಯಳಂತೂರು, ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷತ್ ಉಪಾಧ್ಯಕ್ಷ ವೈ.ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ, ಬೆಳ್ವೆ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಉದಯಕುಮಾರ್ ಪೂಜಾರಿ ಬೆಳ್ವೆ, ಹಿಲಿಯಾಣ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ವೈ.ಕರುಣಾಕರ ಶೆಟ್ಟಿ ಯರುಕೋಣೆ, ಮುಕ್ಕಾಲ್ದಿ ತಾರಾನಾಥ ಶೆಟ್ಟಿ ಹಿಲಿಯಾಣ, ಕಾರ್ಯದರ್ಶಿ ಸಂತೋಷ ಶೆಟ್ಟಿ, ಅರ್ಚಕ ಶೀನ ಪೂಜಾರಿ, ಕರುಣಾಕರ ಪೂಜಾರಿ, ರೇಖಾ ಕೆ.ಶೆಟ್ಟಿ ಹಿಲಿಯಾಣ ಮತ್ತಿತರರು ಉಪಸ್ಥಿತರಿದ್ದರು. ವೈ.ಕರುಣಾಕರ ಶೆಟ್ಟಿ ಯರುಕೋಣೆ ಸ್ವಾಗತಿಸಿ, ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು.